ಸಿಎಂ BSY ಗೆ ಕಟೀಲು ದೇವಿಯ ಫಲಕ ನೀಡಲಿರುವ ನಳೀನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು . 05: ಇಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿರುವ ಸಿಎಂ ಬಿ. ಎಸ್ ಯಡಿಯೂರಪ್ಪ ರವರಿಗೆ , ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿ ಇರುವ ಫಲಕವನ್ನು ನೀಡುವ ಮೂಲಕ ಗೌರವಿಸಲಿದ್ದಾರೆ.

ಎರಡು ದಶಕಗಳ ನಂತರ ಬಿಜೆಪಿ ರಾಜ್ಯಕಾರಣಿ ಮಂಗಳೂರು ನಗರದ ರಮಣ ಪೈ ಸಭಾಂಗಣದಲ್ಲಿ ಇಂದು ಮೂಂಜಾನೆ ಸಿ.ಎಂ. ಯಡಿಯೂರಪ್ಪ ಸಹಿತ ರಾಜ್ಯ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತ್ತು.


ಕಾರ್ಯಕಾರಣಿಕೆಯ ಉದ್ಘಾಟನೆಯನ್ನು ಸಿ.ಎಂ.ಯಡಿಯೂರಪ್ಪನವರು ನೆರವೇರಿಸಿದರು. ಈ ಸಭೆಯು ಬೆಳಗ್ಗೆಯಿಂದ ಸಂಜೆ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಡಿ.ವಿ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್, ಸಿ.ಟಿ ರವಿ, ನ ಜಗದೀಶ್ ಶೇಟ್ಟರ್, ಅರವಿಂದ ಲಿಂಬಾವಳಿ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿಗಳು ಭಾಗವಹಿಸಿದ್ದಾರೆ.

Also Read  ಕಾಂಗ್ರೆಸ್​ ಮಾಜಿ ಶಾಸಕನ ತಮ್ಮನಿಗೆ ಕೋಲಿನಿಂದ ಹೊಡೆದು ಹಲ್ಲೆ.!

error: Content is protected !!
Scroll to Top