ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ವಿವಾಹವಾದ ನಟ ರಾಜ್​ ದೀಪಕ್​ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು . 05: ಸ್ಯಾಂಡಲ್​ವುಡ್​ ನಟ ರಾಜ್​ ದೀಪಕ್​ ಶೆಟ್ಟಿ, ವೃತ್ತಿಯಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್​ ಅವರನ್ನು ವರಿಸಿದ್ದಾರೆ. ದೇವಾಯಲದಲ್ಲಿ ಹಿಂದೂ ಸಂಪ್ರದಾಯದಂತೆ ಹಾಗೂ ಚರ್ಚ್​ನಲ್ಲಿ ಕ್ರೈಸ್ತ್ರ ಸಂಪ್ರದಾಯದಂತೆ ಎರಡು ರೀತಿಯಲ್ಲೂ ಮದುವೆಯಾಗಿದ್ದಾರೆ.

ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿರುವ ರಾಜ್​ ದೀಪಕ್​ ನಟಿಸಿರುವ ರಣಂ, ಕೋಟಿಗೊಬ್ಬ 3, ಗಡಿಯಾರ ಸೇರಿದಂತೆ ಹಲವಾರು ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ.ರಾಜ್ ದೀಪಕ್ ಶೆಟ್ಟಿ ಹಾಗೂ ಸೋನಿಯಾ ಬಹಳ ಸಮಯದಿಂದ ಪ್ರೀತಿಸುತ್ತಿದ್ದು, ಕಳೆದ ಜೂನ್​ ತಿಂಗಳಿನಲ್ಲೇ ಇವರ ನಿಶ್ಚಿತಾರ್ಥವಾಗಿತ್ತು.ಈಗ ಈ ಜೋಡಿಯ ವಿವಾಹ ಮಂಗಳೂರಿನ ಪಣಂಬೂರಿನ ನಂದನೇಶ್ವರ ದೇವಾಲಯದಲ್ಲಿ ನಡೆದಿದೆ.ಜೊತೆಗೆ ಚರ್ಚ್​ನಲ್ಲೂ ಕ್ರೈಸ್ತ್ರ ಸಂಪ್ರದಾಯದಂತೆಯೂ ಮದುವೆಯಾಗಿದ್ದಾರೆ .ವಿವಾಹದ ನಂತರ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Also Read  ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯಾಗೂ ಕೊರೋನ ಪಾಸಿಟಿವ್

 

 

error: Content is protected !!
Scroll to Top