ಅಕ್ರಮ ಜಾನು​ವಾರು ಸಾಗಾ​ಟ ➤ ಮೂವರು ಖದೀಮರ ಅರೇಸ್ಟ್

(ನ್ಯೂಸ್ ಕಡಬ) newskadaba.com  ಕಾರವಾರ . 05: ಕಾರವಾರದ ಯಲ್ಲಾಪುರ ಪಟ್ಟಣದಜೋಡುಕೆರೆ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಜಾನುವಾರುಗಳನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂದಿತ ಆರೋಪಿಗಳನ್ನು ಹರಿಯಾಣ ಮೂಲದ ಮನಪೂಲ್‍ಸಿಂಗ್ ಜಗನ್ನಾಥ, ಈಶ್ವರ್ ಸಿಂಗ್, ವಿಜಯ್ ಸಿಂಗ್ ಹಾಗೂ ಕೇರಳದ ರಿಜಿ ಫಿಲೀಫ್ ಎಂದು ಗುರುತಿಸಲಾಗಿದೆ. ಇವರು ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆಗಳನ್ನು ಹಾಗೂ ಒಂದು ಹಸುವನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ಜೋಡುಕೆರೆ ಬಳಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟ  ಕೆಎಲ್ ರಾಹುಲ್, ರಿಷಬ್ ಪಂತ್ ಗೆ ಸ್ಥಾನ

 

error: Content is protected !!
Scroll to Top