ಕೋಡಿಂಬಾಳ: ವರದಿಗಾರ ಪ್ರಕಾಶ್ ಅವರಿಗೆ ಪಿತೃವಿಯೋಗ

(ನ್ಯೂಸ್ ಕಡಬ) newskadaba.com ಕಡಬ, ನ. 05: ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಬೇಬಿ(63 ವ.) ಅವರು ಕಳೆದ ದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

 

 

ಹಲವಾರು ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಕಳೆದ ದಿನ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಮೃತಪಟ್ಟಿದ್ದಾರೆ. ಮೃತರು ಪತ್ನಿ ರೋಸಮ್ಮ, ಪುತ್ರರಾದ ಈಟಿವಿ ಭಾರತ್ ವೆಬ್ಸೈಟ್ನ ಕಡಬ, ಸುಳ್ಯ ವರದಿಗಾರ ಪ್ರಕಾಶ್ ಕೋಡಿಂಬಾಳ, ಪ್ರಸಾದ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ಕೋಡಿಂಬಾಳ ಚರ್ಚ್ ನಲ್ಲಿ ನಡೆಯಲಿದೆ.

Also Read  ಕಡಬ: ಪತ್ರಕರ್ತನ ಕೊಲೆಯತ್ನ ಆರೋಪ

 

 

error: Content is protected !!
Scroll to Top