ಬಾವಿಗೆ ಬಿದ್ದ ಗೊಬ್ಬರ ತುಂಬಿದ್ದ ಲಾರಿ ➤ 1.36 ಲಕ್ಷ ಮೊತ್ತದ ಗೊಬ್ಬರ ಬಾವಿ ಪಾಲು

(ನ್ಯೂಸ್ ಕಡಬ) newskadaba.com ಕಾರ್ಕಳ . 05: ರಸಗೊಬ್ಬರ ಸಾಗಾಟದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.‌ಉಡುಪಿ ಜಿಲ್ಲೆಯ ಕಾರ್ಕಳದ ಟಿಎಪಿಎಂಸಿ ಬಳಿ ಚಾಲಕ ಹಾಗೂ ಕ್ಲೀನರ್​ ಇಬ್ಬರ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿಯನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಬಾವಿಗೆ ಹಿಂಭಾಗ ಜಾರಿದೆ.

ಬಳಿಕ ಇಡೀ ಲಾರಿ ಮುಂಭಾಗ ಮೇಲ್ಮುಖವಾಗಿ ಬಾವಿಗೆ ಜಾರಿದ್ದು, 30 ಅಡಿ ಆಳದ ಬಾವಿಯೊಳಗೆ ಲಾರಿ ಸಿಲುಕಿಕೊಂಡಿದೆ. ಲಾರಿಯಲ್ಲಿದ್ದ ಒಟ್ಟು 1.36 ಲಕ್ಷ ಮೊತ್ತದ, 20 ಟನ್​ ಗೊಬ್ಬರ ಬಾವಿ ಪಾಲಾಗಿದೆ. ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನ. 3ರಂದು ಚಾಲಕನ ನಿಯಂತ್ರಣ ತಪ್ಪಿ ಲಾರಿ ಬಾವಿಗೆ ಬಿದ್ದಿತ್ತು. ಬುಧವಾರ ಸಂಜೆ ವೇಳೆಗೆ ಲಾರಿಯನ್ನು ಕ್ರೈನ್ ಬಳಸಿ ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.

Also Read  ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಪ್ರಾಣಾಪಾಯದಿಂದ ಪಾರು

error: Content is protected !!
Scroll to Top