ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ ರಿವೀಲ್

(ನ್ಯೂಸ್ ಕಡಬ) newskadaba.com ಬೆಂಗಳೂರು . 04: ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ‘ಡಾರ್ಲಿಂಗ್’ ಕೃಷ್ಣ-ಮಿಲನಾ ನಾಗರಾಜ್‌, ಈ ವರ್ಷದ ಆರಂಭದಲ್ಲಿ ನಾವಿಬ್ಬರು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಅವರ ಫ್ಯಾನ್ಸ್ ತುಂಬ ಖುಷಿಯಾಗಿದ್ದರು.

ಈ ವಿಚಾರವನ್ನು ಬಹಿರಂಗಪಡಿಸುವುದಕ್ಕಾಗಿಯೇ ಒಂದು ಕಲರ್‌ಫುಲ್ ಫೋಟೋಶೂಟ್ ಮಾಡಿಸಿರುವ ಜೋಡಿ, ನಮ್ಮ ಮದುವೆ ದಿನವನ್ನು ತಿಳಿಸಲು ಸಂತೋಷವಾಗುತ್ತಿದೆ. ಫೆಬ್ರವರಿ 14, 2021 ರಂದು ಮದುವೆ ನಡೆಯಲಿದೆ. ನಮ್ಮನ್ನು ಆಶೀರ್ವದಿಸಿ ಎಂದು ಅವರು ತಿಳಿಸಿದ್ದಾರೆ.  ಜೊತೆಗೆ ಕೃಷ್ಣ-ಮಿಲನಾ ಜೋಡಿಗೆ ಸಿನಿಪ್ರಿಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭಕೋರುತ್ತಿದ್ದಾರೆ.

Also Read  ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಾರಣಾಂತಿಕ ಬ್ಯಾಕ್ಟೀರಿಯಾಗಳು ➤ ಅಧ್ಯಯನ ವರದಿ

 

error: Content is protected !!
Scroll to Top