ಕೊಲ್ಲಮೊಗ್ರ : ಗಾಳಿ ಮಳೆಯ ಅಬ್ಬರಕ್ಕೆ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ . 04: ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ ಬಿಟ್ಟು ಬಿಟ್ಟು ಕಾಡುತ್ತಿದೆ. ಮಂಗಳವಾರ (ನ.03) ಸುರಿದ ಗಾಳಿ ಮಳೆಗೆ ಕೊಲ್ಲಮೊಗ್ರದಲ್ಲಿ ಮನೆಯ ಮೇಲೆ ಅಡಿಕೆ ಮರ ಬಿದ್ದಿದೆ. ಪರಿಣಾಮ ಮನೆಯ ಮೆಲ್ಚಾವಣಿ ಜಖಂ ಗೊಂಡು ಹೆಂಚುಗಳು ನೆಲಕಚ್ಚಿವೆ.

ಕೊಲ್ಲಮೊಗ್ರುವಿನ ಮಹಾಲಿಂಗ ಪಾಟಾಳಿ ಅವರ ಮನೆಯ ಮಧ್ಯ ಭಾಗಕ್ಕೆ ಅಡಿಕೆ ಮರವೊಂದು ಗಾಳಿಯ ರಭಸಕ್ಕೆ ಮುರಿದು ಬಿದ್ದಿದೆ. ಇದರಿಂದಾಗಿ ಮನೆಯ ಮೇಲ್ಚಾವಣಿ, ನೂರಾರು ಹಂಚುಗಳು ಪುಡಿ ಪುಡಿಯಾಗಿದೆ. ಸದ್ಯ ಈ ಸಂದರ್ಭದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಸೇರಿಕೊಂಡು ಮೇಲ್ಚಾವಣಿಗೆ ಬಿದ್ದ ಅಡಿಕೆ ಮರವನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು.

Also Read  ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಏರಿಕೆ..!           ನಿಯಂತ್ರಣಕ್ಕೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

 

error: Content is protected !!
Scroll to Top