ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು . 03: ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.  ಶ್ರೀನಗರದಲ್ಲಿ ಇಂದು  ( . 03) ಮಧ್ಯಾಹ್ನ 12.30ರ ಸುಮಾರಿಗೆ ನಿಧನರಾದರು.

ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಸೋಮಶೇಖರ ರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ರವೀ ನಿರ್ದೇಶನದ “ಮಿಥಿಲೆಯ ಸೀತೆಯರು” ಸೋಮಶೇಖರ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೆ ರವೀ ನಿರ್ದೇಶನದ “ಹರಕೆಯ ಕುರಿ”, ಚಿತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಶೇಖರ್ 1981ರಲ್ಲಿ ಚಿತ್ರೋದ್ಯಮ ಪ್ರವೇಶಿಸಿದ್ದರು. ಟಿಎಸ್ ರಂಗಾ ಅವರ “ಸಾವಿತ್ರಿ” ಇವರ ಮೊದಲ ಚಿತ್ರ.86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂದು  ಅಗಲಿದ್ದಾರೆ.

Also Read  ಬಿಜೆಪಿ ಕಾರ್ಯಕರ್ತ ರಾಮು ರಾಥೋಡ್ ಶವವಾಗಿ ಪತ್ತೆ.! ➤ಪ್ರಕರಣ ದಾಖಲು

 

 

 

 

error: Content is protected !!
Scroll to Top