ಚಿಕ್ಕಮಗಳೂರು :ಭಾರಿ ಪ್ರಮಾಣದ ಖೋಟಾ ನೋಟು ವಶಕ್ಕೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು  . 03: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಾವಣೆಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡವು ತನಿಖೆ ನಡೆಸಿದಾಗ ಬರೋಬ್ಬರಿ 5. 50 ಲಕ್ಷ ನಕಲಿ ನೋಟು ಪತ್ತೆಯಾಗಿದೆ.

ಕಾರಿನಲ್ಲಿದ್ದ ಬೆಳ್ತಂಗಡಿಯ ಸಂತೋಷ್ ಮತ್ತು ಸುರತ್ಕಲ್ ನ ನಝೀರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ಅಂತರ್ ರಾಜ್ಯ ಖೋಟಾನೋಟು ಜಾಲವು ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ಕಿಂಗ್ ಪಿನ್ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ ನಿವಾಸಿ ಹೆಚ್.ಎಂ.ಶಾಫಿ ಯಾನೆ ಹಸೈನಾರ್ ಪುತ್ರ ಕುಖ್ಯಾತ ಕ್ರಿಮಿನಲ್ ಜುಬೈರ್ ಪರಾರಿಯಾಗಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ಐವರ ಬಂಧನಕ್ಕೆ ಚಿಕ್ಕಮಗಳೂರು ಪೊಲೀಸರ ವಿಶೇಷ ತಂಡವು ಬಲೆ ಬೀಸಿದೆ.

Also Read  ಕಡಬ ತಾಲೂಕಾಗಿ ಅಂತಿಮ ಅಧಿಸೂಚನೆ ► ಕಡಬ ತಹಶೀಲ್ದಾರ್ ಕಛೇರಿಗೆ ಬಂತು ಆದೇಶ ಪತ್ರ

 

 

 

 

error: Content is protected !!
Scroll to Top