ಪೆರುವಾಜೆ :ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದ ಸುಳ್ಯ ಶಾಸಕರು

(ನ್ಯೂಸ್ ಕಡಬ) newskadaba.com ಪೆರುವಾಜೆ . 03: ಪೆರುವಾಜೆಯಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯ ಉದ್ಘಾಟನೆಯನ್ನು  ನೆರವೇರಿಸಿದರು. ಪೆರುವಾಜೆ ಗ್ರಾಮದ ಅರ್ನಾಡಿ ಕುಕ್ಕುಮೂಲೆ, ವೈಪಾಲ, ಕೊಟ್ಟೆಕಾಯಿ, ರಾಮತ್ತಿ ಕುಮೇರಿ ರಸ್ತೆಗೆ ಶಾಸಕರ ವಿಶೇಷ ಅನುದಾನದಲ್ಲಿ ಬಿಡುಗಡೆಯಾದ ಸುಮಾರು 10 ಲಕ್ಷದ ಯೋಜನೆಯ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಶಾಸಕ ಎಸ್. ಅಂಗಾರರವರು ನವೆಂಬರ್ 01 ರಂದು ಉದ್ಘಾಟಿಸಿದರು.

ಲೋಕಯ್ಯ ಗೌಡ ಕೊಟ್ಟೆಕಾಯಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರರವರನ್ನು ಸದಾನಂದ ಭಟ್ ಅರ್ನಾಡಿ ಶಾಲು ಹೊದಿಸಿ ಸನ್ಮಾಸಿದರು. ಕಾರ್ಯಕ್ರಮದಲ್ಲಿ ಅರ್ನಾಡಿ ಕುಕ್ಕುಮೂಲೆ, ವೈಫಾಲ ರಸ್ತೆ ಬಳಕೆದಾರರು ಹಾಗೂ ಊವವರು ಸೇರಿದಂತೆ ಮಾಜಿ ಗ್ರಾ. ಪಂ ಉಪಾಧ್ಯಕ್ಷರು ಮತ್ತು ಬಿಜೆಪಿ ಮುಖಂಡರು, ಆನೇಕರು ಉಪಸ್ಥಿತರಿದ್ದರು.

Also Read  ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ

error: Content is protected !!
Scroll to Top