ಅಟೋದಲ್ಲಿ ತೆರಳಿ ಮಾದರಿಯಾದ ಬಂಟ್ವಾಳ ಶಾಸಕರು…!

(ನ್ಯೂಸ್ ಕಡಬ) newskadaba.com ಬಂಟ್ವಾಳ, . 02. ಯಾವಾಗಲೂ ಕಾರುಗಳಲ್ಲೇ ಓಡಾಟ ಮಾಡುತ್ತಿರುವ ಜನ ನಾಯಕರನ್ನ ಜನ ಪ್ರತಿನಿಧಿಗಳನ್ನು ನಾವೇಲ್ಲ ಕಂಡಿದ್ದೇವೆ. ಆದರೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ರವರು ಈ ಬಾರಿ ಆಟೋದಲ್ಲಿ ತೆರಳಿ ಅಭಿವೃದ್ಧಿ ಕಾರ್ಯಗಳಿಗೆ ಶಿಲನ್ಯಾಸ ಮಾಡುವ ಮೂಲಕ ತಾನು ಜನ ಸಾಮಾನ್ಯ ಶಾಸಕ ಎಂದು ತೋರಿಸಿಕೊಟ್ಟಿದ್ದಾರೆ.

 

 

ಕಡೇಶಿವಾಲಯ ಗ್ರಾಮದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಶಾಸಕರ ಶಿಫಾರಸು ಮೇರೆಗೆ ಸ್ವಯಂ ಉದ್ಯೋಗದ ಯೋಜನೆಯಡಿಯಲ್ಲಿ ಅಟೋರಿಕ್ಷಾ ಸೌಲಭ್ಯ ಪಡೆದ ಮೋಹನ್ ನಾಯ್ಕ್ ರವರು ಶಾಸಕರಿಗೆ ತನ್ನ ಅಟೋ ರಿಕ್ಷಾವನ್ನು ತೋರಿಸಿದರು. ರಿಕ್ಷಾವನ್ನು ನೋಡಿದ ಬಳಿಕ ಶಾಸಕರು ರಿಕ್ಷಾದಲ್ಲಿ ಕುಳಿತು ಮುಂದಿನ ಶಿಲಾನ್ಯಾಸ ಕಾಮಗಾರಿಗಳಿಗೆ ತೆರಳಿದ್ದು ಗ್ರಾಮದ ಜನರ ಗಮನ ಸೆಳೆಯಿತು. ಶಾಸಕರೇ ರಿಕ್ಷಾದಲ್ಲಿ ಕುಳಿತು ಪ್ರಯಾಣಿಸಿದ ಬಗ್ಗೆ ಮಾಲಕನಿಗೂ ಸಂತಸ ವ್ಯಕ್ತವಾಗಿದೆ.

Also Read  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ➤ ಅಧ್ಯಕ್ಷರ ಪ್ರವಾಸ

 

 

error: Content is protected !!
Scroll to Top