ಸವಣೂರು :ಅಭಿಷೇಕ್ ಎನ್ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಸವಣೂರು . 02: ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2019 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಕಡಬದ , ಸವಣೂರಿನ ನಡುಬೈಲು ನಿವಾಸಿ ಅಭಿಷೇಕ್ ಎನ್ ಶೆಟ್ಟಿ ಭಾಜನರಾಗಿದ್ದಾರೆ.

ಮೂಲತಃ ಇವರು ಕಡಬ ತಾಲೂಕಿನ ಸವಣೂರು ನಡುಬೈಲಿನ ಜಗನ್ನಾಥ ಶೆಟ್ಟಿ ಹಾಗೂ ತುಳಸಿನಿ ಅವರ ಪುತ್ರರಾಗಿದ್ದಾರೆ. ಇವರು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ರೈಲ್ವೇ ಇಲಾಖೆ ಉದ್ಯೋಗಿಯಾಗಿದ್ದಾರೆ. ಡೆಕತ್ಲಾಣ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಕಲೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಹೆಮ್ಮೆ ತಂದಿದ್ದಾರೆ. ಇಂದು ಇವರು ಬೆಂಗಳೂರಿನಲ್ಲಿ ಏಕಲವ್ಯ ಪ್ರಶಸ್ತಿ ಸ್ವೀಕರಿಸಿದರು.ಇನ್ನು ಇವರ ಸಾಧನೆಗಳು ಅಪಾರವಾಗಿದೆ. 2019 ನೇ ಸಾಲಿನ ಏಕಲವ್ಯ ಪ್ರಶಸ್ತಿ ಇವರ ಮುಡಿಗೆರಿರುವುದು ಕಡಬ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

Also Read  10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

 

 

error: Content is protected !!
Scroll to Top