ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಇಬ್ಬರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ನ. 02. ರಿಂಗ್ ರಸ್ತೆಯ ಸಾತಗಳ್ಳಿ ಬಡಾವಣೆ ಸಮೀಪ ಮಹದೇವಪುರ ಚೆಕ್ ಪೋಸ್ಟ್ ಕಡೆಯಿಂದ ವಿಟಿಯು ಕಾಲೇಜು ಕಡೆಗೆ ಹೋಗುತ್ತಿದ್ದಾಗ ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯಿಂದ  ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ  ನಡೆದಿದೆ. ಮೃತರನ್ನು ಅಫ್ತಾಬ್ ಬೇಗ್, ಫರ್ದನ್ ಎಂದು ಗುರುತಿಸಲಾಗಿದೆ.

 

 

ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಶಾಂತಿ ನಗರ ನಿವಾಸಿಗಳಾಗಿದ್ದು, ಸ್ನೇಹಿತರಾಗಿದ್ದರು. ಕಾರಿನಲ್ಲಿದ್ದ ಮುದಾಸಿರ್ ಮತ್ತು ಅಮಿನ್ ಖಾನ್ ಎಂಬುವವರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣ ಚಾಲಕನ ಅತೀ ವೇಗವೇ ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸಿದ್ದಾರ್ಥ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  60ನೇ ಅಖಿಲ ಭಾರತ ಗೃಹರಕ್ಷಕದಳದ ಉತ್ತಾನ ದಿನಾಚರಣೆ ಹಿನ್ನೆಲೆ ರಕ್ತದಾನ ಶಿಬಿರ ➤ ರಕ್ತದಾನವೇ ಶ್ರೇಷ್ಠದಾನ- ಡಾ. ಕಿಶನ್ ರಾವ್

 

error: Content is protected !!
Scroll to Top