LPG ಸಿಲಿಂಡರ್ ಬಳಕೆದಾರರಿಗೆ ಬಿಗ್ ಶಾಕ್ ➤ ಮತ್ತೆ ಸಿಲಿಂಡರ್ ಬೆಲೆ ಏರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, . 02. ಒಂದು ಕಡೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದರೆ, ಮತ್ತೊಂದು ಕಡೆ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಕಂಡಿದ್ದು ಇದು ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು.

 

 

ಬಳಿಕ ಮತ್ತೆ ಇದೀಗ 19 ಕೆಜಿ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಗಳ ಬಲೆಯನ್ನು ಬರೋಬ್ಬರಿ 75 ರೂಪಾಯಿ ಏರಿಕೆ ಮಾಡಿ, ಬಿಗ್ ಶಾಕ್ ನೀಡಿದೆ. ಇದರಿಂದಾಗಿ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ರೂ.1241.50ಕ್ಕೆ ಏರಿಕೆಯಾದಂತೆ ಆಗಿದೆ. ಕಳೆದ ಅಕ್ಟೋಬರ್ ನಲ್ಲಿ ಈ ಬೆಲೆ ರೂ.1166 ಆಗಿತ್ತು. ಇನ್ನೂ ಕೇಲವ ಕಮರ್ಷಿಯಲ್ ಬಳಕೆಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯನ್ನು ಮಾಡಿಲ್ಲ. ಸದ್ಯದಲ್ಲೇ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ.

Also Read  ಉಡುಪಿ: ’ಗೊಂದಲಕ್ಕೆ ಒಳಗಾಗದಂತೆ ಕರ್ತವ್ಯ ನಿರ್ವಹಿಸಿ’ ➤ ಡಿಸಿ ಕೂರ್ಮಾರಾವ್

 

 

error: Content is protected !!
Scroll to Top