ಕಾರ್ಕಳ :ಅಂತಾರಾಷ್ಟ್ರೀಯ ಅಥ್ಲೀಟ್ ಅಭಿನಯಾ ಶೆಟ್ಟಿ ಮುಡಿಗೆ ಏಕಲವ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಾರ್ಕಳ . 02: ಕಾರ್ಕಳದ ಅಂತಾರಾಷ್ಟ್ರೀಯ ಅಥ್ಲೀಟ್ ಅಭಿನಯಾ ಶೆಟ್ಟಿಗೆ ಅವರಿಗೆ ಈ ಸಾಲಿನ ಏಕಲವ್ಯ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ಮೂಲತಃ ಕಾರ್ಕಳದ ಕುಕ್ಕೆಜೆಯ ಅಭಿನಯಾ ಶೆಟ್ಟಿ(21) ಅವರ ಮುಡಿಗೆ ರಾಜ್ಯ ಸರ್ಕಾರ ಹೊರಡಿಸಿರುವ 2019 ರ ಸಾಲಿನ ಏಕಲವ್ಯ ಪ್ರಶಸ್ತಿ ಒಲಿದಿದೆ. ಮೂಢಬಿದಿರೆ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಇವರು ಪ್ರಸ್ತುತ ಮುಂಬೈ ನ ಪಶ್ವಿಮ ರೈಲ್ವೆಯ ಉದ್ಯೋಗಿಯು ಆಗಿದ್ದಾರೆ. ಇವರು ಸುಧಾಕರ್ ಶೆಟ್ಟಿ ಹಾಗೂ ಸಂಜೀವಿ ದಂಪತಿಯ ಪುತ್ರಿಯಾಗಿದ್ದಾರೆ. ಅಭಿನಯಾರವರು, ಶ್ರೀಲಂಕಾದ ಕೊಲಂಬೋ , ಜಪಾನ್, ಇಟಲಿ ಸೇರಿದಂತೆ ಆನೇಕ ಕಡೆಗಳಲ್ಲಿ ಚಾಂಪಿಯನ್ ಶಿಫ್ ಪದಕಗಳನ್ನು ಪಡೆದುಕೊಂಡಿದ್ದಾರೆ.

Also Read  ಮಂಗಳೂರು: ಅಪರಾಧ ವಿಭಾಗದ ಡಿಸಿಪಿ ಆಗಿ ದಿನೇಶ್ ಕುಮಾರ್ ನೇಮಕ

 

 

 

error: Content is protected !!
Scroll to Top