ಕಂಬಳ ಕ್ಷೇತ್ರದಲ್ಲಿ ಸಾಧನೆ ➤ ಇಬ್ಬರಿಗೆ ಒಲಿದ “ಕ್ರೀಡಾರತ್ನ”

(ನ್ಯೂಸ್ ಕಡಬ) newskadaba.com ಮೂಡಬಿದಿರೆ . 02: ಕಂಬಳ ಕ್ಷೇತ್ರದಲ್ಲಿ ಸಾಧನೆಗೈದಿರುವ ಇಬ್ಬರಿಗೆ ಕ್ರೀಡಾರತ್ನ ಪ್ರಶಸ್ತಿ ಒಲಿದಿದೆ ಇದರ ಮೂಲ ಮೂಡಬಿದಿರೆಯ ಗರಿಮೆ ಹೆಚ್ಚಿದಂತಾಗಿದೆ.

 

 

 

ಕಂಬಳ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡು 2019-20ರಲ್ಲಿ ಕಂಬಳದ ಚಿನ್ನದ ಓಟಗಾರನೆಂದು ದಾಖಲೆಯನ್ನು ನಿರ್ಮಿಸಿ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಉಸೇನ್ ಬೋಲ್ಟ್ ಎಂದೇ ಕರೆಯಲ್ಪಟ್ಟ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮತ್ತು ಇನ್ನೊರ್ವ ಕಂಬಳ ಸಾಧಕ ಪ್ರವೀಣ್ ಕೋಟ್ಯಾನ್ ಅಳಿಯೂರು ಅವರು “ಕ್ರೀಡಾರತ್ನ” ಪ್ರಶಸ್ತಿಗೆ ಆಯ್ಕೆ ಯಾಗಿದ್ದು ಈ ಮೂಲಕ ಇಬ್ಬರು ಓಟಗಾರರು ಕಂಬಳ ಕ್ಷೇತ್ರದಲ್ಲಿ ಸಾಧನೆಗೈದಿದಾರೆ.ಇಂದು ಇವರು “ಕ್ರೀಡಾರತ್ನ” ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Also Read  ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ

 

error: Content is protected !!
Scroll to Top