ಎಡಮಂಗಲ- ಪುಳಿಕುಕ್ಕು ರಸ್ತೆ ಕಾಮಗಾರಿಗೆ ಶಾಸಕ ಅಂಗಾರರಿಂದ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ಎಡಮಂಗಲ, ನ. 01. ಗ್ರಾಮದ ಎಡಮಂಗಲ- ಪುಳಿಕುಕ್ಕು ರಸ್ತೆ ಡಾಮರೀಕರಣ ಹಾಗೂ ಇತರ ನಾಲ್ಕು ರೆಸ್ತೆಗಳ ಕಾಂಕ್ರಿಟೀಕರಣ ಸೇರಿದಂತೆ ಒಟ್ಟು 5 ರಸ್ತೆಗಳ ಗುದ್ದಲಿಪೂಜೆಯನ್ನು ಶಾಸಕ ಅಂಗಾರರು ಇಂದು ನೆರವೇರಿಸಿದರು.

ಗ್ರಾಮ ಸಡಕ್ ಯೋಜನೆಯಡಿಯಲ್ಲಿ  ಪುಳಿಕುಕ್ಕು- ಎಡಮಂಗಲ ರಸ್ತೆ ಅಭಿವೃದ್ದಿಗೆ 1.60 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 80 ಲಕ್ಷದ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು.  ಇದರ ಜೊತೆಗೆ ದೋಳ್ತಿಲ- ಬಳಕೆಮಜಲು ರಸ್ತೆಗೆ ಹತ್ತು ಲಕ್ಷ , ಎಡಮಂಗಲ- ಅಳಕೆ ರಸ್ತೆಗೆ 15 ಲಕ್ಷ, ಸುಲಂತಡ್ಕ- ಲೆಕ್ಕೆಸಿರಿಮಜಲು ರಸ್ತೆಗೆ 10 ಲಕ್ಷ, ಬೋನಡ್ಕ- ಕೊಡೆಂಕಿರಿ ರಸ್ತೆಗೆ 10 ಲಕ್ಷ, ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಸುಭದಾ ಎಸ್.ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಎಡಮಂಗಲ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗೇರಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group