ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ➤ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, . 01. ಈಗಾಗಲೇ ಈರುಳ್ಳಿ ಬೆಲೆ 100ರ ಗಡಿ ದಾಟಿ ಕಣ್ಣೀರು ತರಿಸುತ್ತಿದೆ. ಇದರ ಮಧ್ಯೆ ಗ್ರಾಹಕರಿಗೆ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆಯಾಗುವ ಮೂಲಕ ಗ್ರಾಹಕರಲ್ಲಿ ಮತ್ತೊಂದು ಶಾಕ್ ನೀಡಿದೆ.

 

 

ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆ ಇದೇ ಮೊದಲ ಬಾರಿಗೆ ರೂ.50ಕ್ಕಿಂತ ಹೆಚ್ಚು ಬೆಲೆ ಏರಿಕೆ ಕಂಡಿದೆ. ಶೇ.44ರಷ್ಟು ಈರುಳ್ಳಿ ಬೆಲೆ ಏರಿಕೆ ಕಂಡಿದ್ದರೇ, ಶೇ.92ರಷ್ಟು ಆಲೂಗಡ್ಡೆ ಏರಿಕೆಯನ್ನು ಇದೇ ಮೊದಲ ಬಾರಿಗೆ ಎರಡು ವರ್ಷಗಳಲ್ಲಿ ಏರಿಕೆ ಕಂಡಿದೆ. ಈ ಕುರಿತಂತೆ ಹಾಪ್ ಕಾಮ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಆಲೂಗಡ್ಡೆ ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ರೂ.55ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ. 50 ರೂಪಾಯಿಗಿಂತ ಹೆಚ್ಚು ಹೆಚ್ಚಿದ್ದು, ಇದೇ ಮೊದಲ ಬಾರಿಗೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ.

Also Read  ಆ.29 ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆ

 

error: Content is protected !!
Scroll to Top