ಉಡುಪಿಯಲ್ಲಿ ಎರಡು ತಂಡಗಳ ನಡುವೆ ಜಗಳ ➤ ದ್ವಿಚಕ್ರ ವಾಹನ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಉಡುಪಿ, ನ. 01. ಬ್ರಹ್ಮಾವರದ ಅಮ್ಮುಂಜೆಯಲ್ಲಿ ತಂಡಗಳ ಸದಸ್ಯರು ಮದ್ಯದ ಅಮಲಿನಲ್ಲಿದ್ದು ಎರಡು ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾದ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಈ ನಡುವೆ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ವಾಹನಗಳ ಮೇಲೆ ಶಸ್ತ್ರಾಸ್ತ್ರಗಳ ಬಳಕೆಯ ಗುರುತುಗಳಿವೆ.

 

 

ಇತ್ತಂಡಗಳ ನಡುವಿನ ಜಗಳದಿಂದಾಗಿ ಈ ಘಟನೆ ನಡೆದಿದೆ. ಎರಡು ತಂಡಗಳ ನಡುವೆ ವೈಷಮ್ಯವಿದ್ದು, ಕಳೆದ ದಿನ  ರಾತ್ರಿ ನಡೆದ ಗಲಾಟೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ ಎನ್ನಲಾಗಿದೆ. ಒಂದು ತಂಡ ಕೊಳಾಲ್‌‌ಗಿರಿಯಿಂದ ಬಂದಿದ್ದು, ಇನ್ನೊಂದು ತಂಡ ಹೊರಗಿನಿಂದ ಬಂದವರಾಗಿದ್ದಾರೆ. ಕೊಳಾಲ್‌‌ಗಿರಿಯಿಂದ ಬಂದ ತಂಡದವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಈ ವೇಳೆ ವಾಹನಗಳನ್ನು ಸುಟ್ಟು ಹಾಕಲಾಗಿದ್ದು, ಇದಕ್ಕೆ ಹೆದರಿದ ಸ್ಥಳೀಯ ತಂಡ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸ್‌ ಮೂಲಗಳ ಪ್ರಕಾರ, ಈಗಾಗಲೇ ಆರು ಮಂದಿಯನ್ನು ವಶಕ್ಕೆ ತೆಗದುಕೊಳ್ಳಲಾಗಿದೆ. ಸೂರಜ್‌‌, ಆಲ್ವಿನ್‌‌, ಮೋಹಿತ್‌, ಬಾಲಕೃಷ್ಣ, ಮಣಿಕಾಂತ ಹಾಗೂ ಪಪ್ಪು ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿಲ್ಲ.

Also Read  ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.!

error: Content is protected !!
Scroll to Top