ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಹುಲಿ ಮೃತ

 (ನ್ಯೂಸ್ ಕಡಬ) newskadaba.com ಶಿವಮೊಗ್ಗ, . 28.  ಸುಮಾರು 5 ವರ್ಷದ ಹೆಣ್ಣು ಹುಲಿಯೊಂದು ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ತೇಗೂರುಗುಡ್ಡ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿ ಮೃತದೇಹ ಪತ್ತೆಯಾಗಿದ್ದು, 4-5 ದಿನಗಳ ಹಿಂದೆ ಸತ್ತಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

 

 

ಬೇರೊಂದು ಹುಲಿಯೊಂದಿಗೆ ಕಾದಾಟ ನಡೆಸಿದ ವೇಳೆ ಗಾಯಗೊಂಡು ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಭದ್ರಾ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ತಾಕತ್ ಸಿಂಗ್ ರಣಾವತ್ ಅವರು ತಿಳಿಸಿದ್ದಾರೆ.ಮಂಗಳವಾರ ಹುಲಿ ಶವ ಪತ್ತೆಯಾಗಿತ್ತು. ಶಿವಮೊಗ್ಗದಿಂದ ಪಶುವೈದ್ಯರು ಸ್ಥಳಕ್ಕೆ ಬರುವ ಹೊತ್ತಿಗೆ ಸಂಜೆ 6 ಗಂಟೆಯಾಗಿತ್ತು. ಕಾರ್ಯವಿಧಾನಗಳ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹುಲಿಯ ಶವದ ಮೇಲೆ ಹಲ್ಲುಗಳ ಗುರುತುಗಳು ಪತ್ತೆಯಾಗಿವೆ ಎಂದಿದ್ದಾರೆ.

Also Read  ಸಿ.ಐ.ಎಸ್.ಎಫ್. ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ

 

 

error: Content is protected !!
Scroll to Top