ಉಪ್ಪಿನಂಗಡಿ: ಕೋವಿಡ್-19 ಹಿನ್ನಲೆ ತೆಕ್ಕಾರಿನಲ್ಲಿ ಸರಳ ಈದ್ ಮೀಲಾದ್ ಆಚರಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, . 28.  ತೆಕ್ಕಾರು ಪ್ರತೀ ವರ್ಷ ಬಾರಿ ವಿಜೃಂಭಣೆಯಿಂದ ನಡೆಯುತ್ತಿದ್ದ ಪ್ರವಾದಿ ಪೈಗಂಬರ್ (ಸ.ಅ)ಮರ ಜನ್ಮ ದಿನಾಚರಣೆ ಪ್ರಯುಕ್ತ ಮೀಲಾದ್ ಆಚರಣೆ ಈ ಬಾರಿ ಕೋವಿಡ್ ನಿಮ್ಮಿತ ಸರಕಾರದ ಮಾರ್ಗ ಸೂಚಿಯಂತೆ ಸರಳವಾಗಿ ತೆಕ್ಕಾರು ಕೇಂದ್ರ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.

 

 

ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಮತ್ತು ಬೃಹತ್ ಮೌಲಿದ್ ಮಜ್ಲೀಸ್ ನಡೆಸಲಾಯಿತು. ಸರ್ಕಾರದ ಮಾರ್ಗ ಸೂಚಿಯಂತೆ ತೆಕ್ಕಾರು ಜಮಾಅತ್ ವ್ಯಾಪ್ತಿಯವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮೀಲಾದ್ ಜಾಥ, ಮಕ್ಕಳ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮತಪ್ರಬಾಷಣಗಳಿಗೆ ಅವಕಾಶವಿರಲಿಲ್ಲ. ಕಾರ್ಯಕ್ರಮಕ್ಕೆ ಸೆಯ್ಯದ್ ಪಾಟ್ರಕೋಡಿ ತಂಙಳ್ ದುಆ ಆಶೀರ್ವಚನ ನೀಡಿದರು. ಸ್ಥಳೀಯ ಖತೀಬ್ ಹಂಝ ಸಖಾಫಿ ಅಲ್-ಅಝ್ಹರಿ ನೇತೃತ್ವ ನೀಡಿದರು. ಜಮಾಅತ್ ಅಧ್ಯಕ್ಷ M.T ಆದಂ ಬಾಜಾರ ಧ್ವಜಾರೋಹಣಗೈದರು, ಇಸ್ಹಾಕ್ ಮದನಿ ಅಳಕ್ಕೆ, ಉಸ್ಮಾನ್ ಮುಸ್ಲಿಯಾರ್, ಉಸ್ಮಾನ್ ಸಹದಿ, ಅತಾವುಲ್ಲ T.H ಉಪಸ್ಥಿತರಿದ್ದರು. ಜಮಾಅತ್ ವ್ಯಾಪ್ತಿಯ ಹಲವಾರು ಮಂದಿ ಭಾಗವಹಿಸಿದರು.

Also Read  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 88ನೇ ಸರ್ವ ಧರ್ಮ ಸಮ್ಮೇಳನ

 

 

error: Content is protected !!
Scroll to Top