ಪಂಜ: ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ

 (ನ್ಯೂಸ್ ಕಡಬ) newskadaba.com ಪಂಜ , . 28.  ರಂಗ ಸಾಮ್ರಾಟ್ ಅಭಿನಯ ಶಾಲೆ ಧಾರವಾಡ ಕರ್ನಾಟಕ, ಇವರು ಆಯೋಜಿಸಿದ ರಾಷ್ಟ್ರಮಟ್ಟದ ಆರ್ಟ್ ಪೆಸ್ಟ್ 2020 ರ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ-ಅಂತರಾಷ್ಟೀಯ ಮಟ್ಟ, ರಾಜ್ಯ ಮಟ್ಟ, ಜಿಲ್ಲಾ ಮಟ್ಟದಲ್ಲಿ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇಲ್ಲಿಯ ವಿದ್ಯಾರ್ಥಿಗಳಾದ ಕುಶಿತ್ ಮಲ್ಲಾರ 3 ನೇ ತರಗತಿ “ಪ್ರಥಮ” ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಪ್ರಣಮ್ ಸಂಕಡ್ಕ 4ನೇ ತರಗತಿ “ಪ್ರಥಮ”, ಪ್ರೇಕ್ಷಕ್.ಹೆಚ್ 7 ನೇ ತರಗತಿ “ದ್ವಿತೀಯ” ಸೈಂಟ್ ಆನ್ಸ್ ಕಡಬ, ಅಭಿಜ್ಞಾ ಪಿ.ಎಸ್. 10ನೇ ತರಗತಿ “ದ್ವಿತೀಯ” ಸೈಂಟ್ ಆನ್ಸ್ ಪ್ರೌಢ ಶಾಲೆ ಕಡಬ.

 

 

ಉತ್ತಮ ಕಲಾಕೃತಿ ಅವಾರ್ಡ್
ರಿಧಿ.ಟಿ 1ನೇತರಗತಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಪ್ರಾಪ್ತಿ ಎನ್. ಎಸ್. 1ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಸಾನ್ವಿ ಎನ್. ಎಸ್. 2ನೇತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಅನ್ವಿತಾ ಸಿ. 4 ನೇತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ ಜಸ್ಟಿತ್ 6ನೇತರಗತಿ ಸೈಂಟ್ ಆನ್ಸ್ ಕಡಬ, ಎಸ್. ಕುಶ್ಮಿತಾ 6ನೇತರಗತಿ ಕೆ.ಎಸ್. ಗೌಡ ವಿದ್ಯಾಲಯ ನಿಂತಿಕಲ್ಲು. ಈ ಎಲ್ಲಾ ವಿದ್ಯಾರ್ಥಿಗಳು “ರಾಷ್ಟ್ರ ಮಟ್ಟದ ಪ್ರಶಸ್ತಿ” ಪಡೆದಿರುತ್ತಾರೆ. ಚಿತ್ರಕಲಾ ಶಿಕ್ಷಕರಾಗಿ ನಡೆಸಿದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸತೀಶ್ ಪಂಜರಿಗೆ “Best Painting Award” ಬಂದಿರುತ್ತದೆ. ಈ ಎಲ್ಲಾ ವಿದ್ಯಾಥಿಗಳಿಗೆ ರಾಷ್ಟ್ರಪ್ರಶಸ್ತಿ ವಿಜೇತರಾದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ಕಲಾ ನಿರ್ಧೆಶಕ ಸತೀಶ್ ಪಂಜ ರವರು ತರಭೇತಿ ನೀಡಿರುತ್ತಾರೆ.

Also Read  ಮಂಗಳೂರು ತಾಲೂಕು ಪಂಚಾಯತ್ ➤ ಸಾಮಾನ್ಯ ಸಭೆ

 

 

error: Content is protected !!
Scroll to Top