(ನ್ಯೂಸ್ ಕಡಬ) newskadaba.com ಕಡಬ,ಸೆ.29. ಮಲಂಕರ ಸಿರಿಯನ್ ಕ್ಯಾಥಲಿಕ್ ಧರ್ಮ ಸಭೆ ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅತೀವಂದನೀಯ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಕಾಲಾಯಿಲ್ರವರ ಪೀಠಾರೋಹಣ ಹಾಗೂ ಅಭಿನಂದನಾ ಸಮಾರಂಭವು ಸೆ.30ರಂದು ನೂಜಿಬಾಳ್ತಿಲ ಸೈಂಟ್ ಮೇರೀಸ್ ಕಥೀಡ್ರಲ್ನಲ್ಲಿ ನಡೆಯಲಿದೆ ಎಂದು ಪೀಠಾರೋಹಣ ಸಮಾರಂಭದ ಪ್ರಧಾನ ಸಂಯೋಜಕರಾದ ಫಾ. ಪಿಲಿಪ್ ನೆಲ್ಲಿವಿಳ ಹೇಳಿದ್ದಾರೆ.
ಸೆ.30ರಂದು ಬೆಳಿಗ್ಗೆ 8.30ಕ್ಕೆ ಭಾರತ ಕಥೋಲಿಕ್ ಧರ್ಮಾಧ್ಯಕರುಗಳ ಮಂಡಳಿಯ ಅಧ್ಯಕ್ಷ ಘನವೆತ್ತ ಪರಮಪೂಜ್ಯ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲಿಕೋಸ್ ಹಾಗೂ ನೂತನ ಧರ್ಮಾಧ್ಯಕ್ಷರುಗಳಿಗೆ ಧಾರ್ಮಿಕ ಸ್ವಾಗತ ನೀಡಿದ ಬಳಿಕ, ವಿಜೃಂಭಣೆಯ ಸಮೂಹ ದಿವ್ಯ ಬಲಿಪೂಜೆ ನಡೆಯಲಿದೆ. ನಂತರ ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಅತೀವಂದನೀಯ ಡಾ| ಬರ್ನಾಡ್ ಮೋರಸ್ರವರಿಂದ ಸುವಾರ್ತಾ ಪ್ರವಚನ ನಡೆಯಲಿದ್ದು. ಬೆಳಿಗ್ಗೆ 11.00ಗಂಟೆಗೆ ನೂತನ ಧರ್ಮಾಧ್ಯಕ್ಷರಾದ ಅತೀವಂದನೀಯ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಕಾಲಾಯಿಲ್ರವರ ಪೀಠರೋಹಣ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ.
ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ವೈದಿಕ ಜಿಲ್ಲೆ ಪ್ರೋಟೋ ವಿಕಾರ್ ವೆರಿ| ರೆ| ಫಾ| ಪೀಟರ್ ಜೋನ್ ಒವೈಸಿ ಸ್ವಾಗತಿಸಲಿದ್ದು ಅಧ್ಯಕ್ಷತೆಯನ್ನು ಭಾರತ ಕಥೋಲಿಕ್ ಧರ್ಮಾಧ್ಯಕರುಗಳ ಮಂಡಳಿಯ ಅಧ್ಯಕ್ಷರಾದ ಘನವೆತ್ತ ಪರಮಪೂಜ್ಯ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲಿಕೋಸ್ ವಹಿಸಲಿದ್ದಾರೆ. ಅರಣ್ಯ, ಪರಿಸರ ಮತ್ತು ಜೀವಿವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಿರುವಲ್ಲ ಮಹಾಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀವಂದನೀಯ ಡಾ| ತೋಮಸ್ ಮಾರ್ ಕೂರಿಲೋಸ್, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀವಂದನೀಯ ಡಾ| ಅಲೋಶಿಯಸ್ ಪೌಲ್ ಡಿ,ಸೋಜಾ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀವಂದನೀಯ ಮಾರ್ ಲೋರೆನ್ಸ್ ಮುಕ್ಕುಝಿ, ಪುತ್ತೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀವಂದನೀಯ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಐವನ್ ಡಿ,ಸೋಜಾ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಲ ಟಿ. ಶೆಟ್ಟಿ, ಸುಳ್ಯ ಶಾಸಕ ಎಸ್.ಅಂಗಾರ, ಬೆಥನಿ ಸನ್ಯಾಸ ಸಮೂಹದ ಸುಪೀರಿಯರ್ ಜನರಲ್ ವಂ| ಫಾ| ಜೋಸ್ ಕುರುವಿಳ ಒವೈಸಿ, ದೀನಸೇವಾ ಸಮೂಹದ ಅಸಿ. ಸುಪೀರಿಯರ್ ವಂ| ಸಿ| ವಂದನ ಡಿಎಸ್ಎಸ್, ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಕೆ.ಆರ್.ಸಿ.ಬಿ.ಸಿ ಮಹಿಳಾ ಆಯೋಗದ ಪ್ರಾಂತೀಯ ಕಾರ್ಯದರ್ಶಿ ಲೌಲಿ ಎಲ್ದೋಸ್ ಭಾಗವಹಿಸಲಿದ್ದಾರೆ. ನಿವೃತ್ತ ಧರ್ಮಾಧ್ಯಕ್ಷರಿಗೆ ಗೌರವಾರ್ಪಣೆಯನ್ನು ಶಿವಮೊಗ್ಗ ವೈದಿಕ ಜಿಲ್ಲಾ ಪ್ರೋಟೋ ವಿಕಾರ್ ವಂ| ಫಾ| ಡಾ| ಎಲ್ದೋ ಪುತ್ತನ್ಕಂಡತ್ತೀಲ್, ಮಾಡಲಿದ್ದು ಬಳಿಕ ನೂತನ ಧರ್ಮಾಧ್ಯಕ್ಷರ ಶುಭಸಂದೇಶ ನೀಡಲಿದ್ದು ಪುತ್ತೂರು ಧರ್ಮಪ್ರಾಂತ್ಯದ ಚಾನ್ಸಿಲರ್ ವಂ| ಫಾ| ಫಿಲಿಪ್ ಅಭಿನಂದನಾ ಸಭೆಯ ಧನ್ಯವಾದ ಸಮರ್ಪಣೆಗೈಯಲಿದ್ದಾರೆ ಬಳಿಕ ಪೇಪಲ್ ಗೀತೆ, ರಾಷ್ಟ್ರಗೀತೆ ನಡೆದು ಭಕ್ತಾಧಿಗಳಿಗೆ ಸ್ನೇಹ ಭೋಜನ ನಡೆಯಲಿದೆ.