ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 28. ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದವರನ್ನು ಲಕ್ಷ್ಮೀಬಾಯಿ (19) ಎಂದು ಗುರುತಿಸಲಾಗಿದೆ. ಯುವತಿ ಅಕ್ಟೋಬರ್ 18 ರಂದು ಕಣ್ಣೂರು ಗ್ರಾಮದ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:  ಪ್ರಾಯ – 19 ವರ್ಷ, ಎತ್ತರ- 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ,  ಧರಿಸಿದ ಬಟ್ಟೆ – ಬಿಳಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶಾಲು ಧರಿಸಿರುತ್ತಾಳೆ. ಲಂಬಾಣಿ, ಕನ್ನಡ, ತುಳು ಭಾಷೆ ಮಾತನಾಡ ಬಲ್ಲವಳಾಗಿದ್ದಾಳೆ. ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ವಿಧಾನಸಭೆಯಲ್ಲಿ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ 4% ಮೀಸಲಾತಿ ಕೊಡುವ ಬಿಲ್‌ ಪಾಸ್

error: Content is protected !!
Scroll to Top