ಅಂತರ್ಜಾತೀಯ ಮದುವೆಯಾದರೆ ಸಿಗುತ್ತೆ 2.5 ಲಕ್ಷ ರೂಪಾಯಿ…!

(ನ್ಯೂಸ್ ಕಡಬ) newskadaba.com ಒಡಿಶಾ, ಅ. 28. ಒಡಿಶಾ ಸರ್ಕಾರ ಅಂತರ್ಜಾತೀಯ ಮದುವೆಯಾದವರಿಗೆ ಸಿಹಿಸುದ್ದಿ ನೀಡಿದ್ದು, ಪ್ರೋತ್ಸಾಹಧನವನ್ನ ಒಂದು ಲಕ್ಷ ರೂಪಾಯಿಯಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.

 

ಈ ಕುರಿತು ರಾಜ್ಯ ಎಸ್​ಟಿ, ಎಸ್​ಸಿ ಡೆವಲಪ್​ಮೆಂಟ್​, ಮೈನಾರಿಟೀಸ್ ಆಯಂಡ್ ಬ್ಯಾಕ್​ವರ್ಡ್ ಕ್ಲಾಸಸ್ ವೆಲ್​​ಫೇರ್ ಡಿಪಾರ್ಟ್​ಮೆಂಟ್ ಸುಮಂಗಲ ಎಂಬ ಹೆಸರಿನ ಈ ಪೋರ್ಟಲ್ ಒಂದನ್ನ ಅಭಿವೃದ್ಧಿಪಡಿಸಿದೆ. ದಂಪತಿ ಅರ್ಜಿ ಸಲ್ಲಿಸಿದ 60 ದಿನದೊಳಗೆ ಅವರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದೆ. ಈ ಯೋಜನೆಯ ಲಾಭ ಪಡೆಯಬೇಕಾದ್ರೆ, ಮೇಲ್ವರ್ಗದ ಹಿಂದುಗಳು ಪರಿಶಿಷ್ಟ ಜಾತಿಯವರನ್ನ ವಿವಾಹವಾದ್ರೆ, ಈ ವಿವಾಹವು 1955ರ ಹಿಂದು ವಿವಾಹ ಕಾನೂನಿನ ಪ್ರಕಾರ ಮಾನ್ಯತೆ ಹೊಂದಿರಬೇಕು. ಪತಿ ಅಥವಾ ಪತ್ನಿ ಯಾರಾದರೊಬ್ಬರು ಸಂವಿಧಾನದ ಅನುಚ್ಛೇದ 341ರ ಪ್ರಕಾರ ವ್ಯಾಖ್ಯಾನಿಸಿರುವ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಫಲಾನುಭವಿಗಳು, ಏಕ ಕಂತಿನ ಈ ಪ್ರೋತ್ಸಾಹ ಧನ ಪಡೆಯಬಹುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

Also Read  ಲೇಡಿ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಮೃತ್ಯು

 

error: Content is protected !!
Scroll to Top