ಸುಳ್ಯ: ತೊಡಿಕಾನ ದೇವರಗುಂಡಿಯಲ್ಲಿಅಶ್ಲೀಲ ಫೋಟೋಶೂಟ್ ➤ ಭಕ್ತರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 28. ಇತ್ತೀಚಿನ ದಿನಗಳಲ್ಲಿ ತೊಡಿಕಾನ ಕ್ಷೇತ್ರಕ್ಕೆ ಸಂಬಂಧಿಸಿದ ದೇವರಗುಂಡಿಯಲ್ಲಿ ಕೆಲವರು ಅಶ್ಲೀಲವಾಗಿ ಫೋಟೋಗಳನ್ನು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ದೇವಾಲಯಕ್ಕೆ ಸಂಬಂಧಪಟ್ಟವರ ಜೊತೆ ಯಾವುದೇ ಅನುಮತಿ ಪಡೆಯದೇ ಅಶ್ಲೀಲ ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. ಇದೊಂದು ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವ್ಯವಸ್ಥಾಪನಾ ಮಂಡಳಿಯ ಮಾಜಿ ಅಧ್ಯಕ್ಷರು ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವಾದರೂ ಅದು ಅರಣ್ಯ ವ್ಯಾಪ್ತಿಯಲ್ಲಿದ್ದು, ನಾವು ಅಲ್ಲಿ ಯಾವುದೇ ಸೆಕ್ಯೂರಿಟಿ ಇಡಲು ಸಾಧ್ಯವಿಲ್ಲ, ಆದರೇ ಇಂತಹ ಘಟನೆಗಳು ಇನ್ಮುಂದೆ ಮರುಕಳಿಸಬಾರದು, ಇಂತಹ ಘಟನೆಗಳಿಂದ ಶ್ರೀ ಕ್ಷೇತ್ರಕ್ಕೆ ಧಕ್ಕೆಯಾಗಬಾರದು ಎಂದಿದ್ದಾರೆ.

Also Read  ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ಚರ್ಚ್ ನ ಧರ್ಮಗುರು ವಂದನೀಯ ರೋಯ್ ಲೋಬೋ ನೆರವೇರಿಸಿದರು

error: Content is protected !!
Scroll to Top