ಡಾ.ಸುಧಾಮೂರ್ತಿಗೆ ಅವಹೇಳನ ➤ ವೆಬ್ ಸಿರೀಸ್ ನಿರ್ದೇಶಕನ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 26. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಬಗ್ಗೆ ಅವಹೇಳನ ಮಾಡಿದ ಆರೋಪದ ಮೇರೆಗೆ ಓಲ್ಡ್ ಟೌನ್ ಕ್ರಿಮಿನಲ್ಸ್ ವೆಬ್ ಸಿರೀಸ್ ಇದರ ನಿರ್ದೇಶಕ ಅಮರ್ ಹಾಗೂ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲಾಗಿದೆ.

 

‘ನಮ್ಮ ಕರ್ನಾಟಕ’ ರಕ್ಷಣಾ ವೇದಿಕೆ ಇದರ ಅಧ್ಯಕ್ಷರಾದ ಜಯರಾಜ್ ನಾಯ್ಡು ಎಂಬವರು ಈ ಕುರಿತು ದೂರು ನೀಡಿದ್ದು, ಯೂಟ್ಯೂಬ್ ನಲ್ಲಿ ಅಮರ್ ಹಾಕಿರುವ ಓಲ್ಡ್ ಟೌನ್ ಕ್ರಿಮಿನಲ್ಸ್ ಸಾಕ್ಷ್ಯ ಎಂಬ ಚಿತ್ರದ ವೆಬ್ ಸೀರಿಸ್ ನ ಸನ್ನಿವೇಶದಲ್ಲಿ ಡಾ. ಸುಧಾಮೂರ್ತಿ ಅವರ ಹೆಸರು ಬದಲಿಸಿ ಅವಹೇಳನ ಮಾಡಿದ್ದಲ್ಲದೇ, ಏಕವಚನದಲ್ಲೇ ಪದಪ್ರಯೋಗ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Also Read  ಕಡಬ: ಪರ್ಸ್ ಎಗರಿಸಿದ ಅಪ್ರಾಪ್ತ ಬಾಲಕರು ➤ ಹಿಡಿದು ಪೋಲಿಸರಿಗೊಪ್ಪಿಸಿದ ಸ್ಥಳೀಯರು

error: Content is protected !!
Scroll to Top