ವ್ಹೀಲಿಂಗ್ ನಡೆಸುತ್ತಿದ್ದ 15 ಯುವಕರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 26. ವೀಲ್ಹಿಂಗ್ ಮಾಡುತ್ತಿದ್ದ ಸುಮಾರು 15 ಮಂದಿ ಯುವಕರನ್ನು ಬಂಧಿಸಿದ ಘಟನೆ ಬಸವನಗುಡಿಯಲ್ಲಿ ನಡೆದಿದೆ.

ವೀಲ್ಹಿಂಗ್ ಗಾಗಿ ಬೈಕ್ ಗಳನ್ನು ತಯಾರು ಮಾಡುವಂತಹ ಮೂರು ಗ್ಯಾರೇಜ್ ನ ಮಾಲಕರ ವಿರುದ್ಧ ಕೂಡಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ನಗರದಲ್ಲಿ ವಾಹನ ಸಂಚಾರವು ಕಡಿಮೆಯಿದ್ದ ಕಾರಣದಿಂದ ಈ ಯುವಕರು ವೀಲ್ಹಿಂಗ್ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲಿಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಬಂಧಿಸಿ, ಎಲ್ಲಾ ಬೈಕ್ ನ್ನು ಸೀಜ್ ಮಾಡಿರುವುದಾಗಿ ತಿಳಿದು ಬಂದಿದೆ.

Also Read  ಮಣಿಪುರದಲ್ಲಿ ಮ್ಯಾನ್ಮಾರ್ ಪ್ರಜೆ ಬಂಧನ, ಕೋಟ್ಯಂತರ ಮೌಲ್ಯದ ಯಾಬಾ ಮಾತ್ರೆ ವಶ

error: Content is protected !!
Scroll to Top