ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ವಾಟಾಳ್ ಪ್ರತಿಭಟನೆ ➤ ನಾಗರಾಜ್ ಹಾಗು ಕಾರ್ಯಕರ್ತರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮೈಸೂರು, ಅ.26. ಸರ್ಕಾರ ಅತಿ ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ, ಮೈಸೂರಿನಲ್ಲಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರು ದಸರಾ ಹಬ್ಬವನ್ನ ಹಾಗು ಚಾಮುಂಡೇಶ್ವರಿ ತಾಯಿ ಭಾವಚಿತ್ರ ಇಟ್ಟು ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರ ಮೆರವಣಿಗೆ ನಡೆಸಲು ಉದ್ದೇಶಿಸಿ ವಾಟಾಳ್ ಪ್ರತಿಭಟನೆಗೆ ಮುಂದಾಗಿದ್ದರು. ಇದೀಗ ನಾಗರಾಜ್ ಹಾಗು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 

Also Read  ಮಂಗಳೂರು: ಬೈಕ್ ಅಪಘಾತ; ಯುವಕ ಮೃತ್ಯು

ಬ್ಯಾಂಡ್ ಸೆಟ್ ಸಾರೋಟು ಪೊಲೀಸರು ವಶಕ್ಕೆ ಪಡೆದು, ಇದರಿಂದ ತೀವ್ರ ಕೆರಳಿದ ವಾಟಾಳ್ ನಾಗರಾಜ್ ರವರು ಸರ್ಕಾರದ ಕ್ರಮವನ್ನ ಖಂಡಿಸಿ ಮುಖ್ಯಮಂತ್ರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

 

 

error: Content is protected !!
Scroll to Top