ಉಳ್ಳಾಲ: ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಉಳ್ಳಾಲ, ಅ. 26. ನ್ಯೂ ಟೌನ್ ಮೆಡಿಕಲ್ ಮಾಸ್ತಿಕಟ್ಟೆ ಉಳ್ಳಾಲ ಇದರ ಉದ್ಘಾಟನಾ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಹಾಗೂ ಕೆ.ಎಂ.ಸಿ ರಕ್ತ ನಿಧಿ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ 73ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ಮಾಸ್ತಿಕಟ್ಟೆ ಉಳ್ಳಾಲ ಜಂಕ್ಷನ್ ನಲ್ಲಿ ನಡೆಯಿತು.

ಶಿಬಿರದಲ್ಲಿ ಹೆಚ್ಚಿನ ದಾನಿಗಳು ಬಾಗವಹಿಸಿ ರಕ್ತ ದಾನ ಮಾಡುವ ಮೂಲಕ ಜೀವ ದಾನಿಗಳಾದರು. ಈ ಕಾರ್ಯಕ್ರಮದಲ್ಲಿ ನ್ಯೂ ಟೌನ್ ಮೆಡಿಕಲ್ಸ್ ಮಾಲಕರಾದ  ಮನ್ಸೂರ್ ಅಹಮದ್, ನಾಸಿರ್ ಅಹಮದ್  ಲೈಫ್ ಕೇರ್ ಮೆಡಿಕಲ್ಸ್ ಗ್ರೂಪಿನ  ಮಾಲಕರು ಹಾಗೂ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮೆಡಿಕಲ್ ವಿಬಾಗದ ಇನ್ ಚಾರ್ಜ್  ಮುಝಮ್ಮಿಲ್ ಉಳ್ಳಾಲ,  ಕೆ ಎಂ ಸಿ ರಕ್ತ ನಿಧಿ ವಿಬಾಗದ ಸಿಬ್ಬಂದಿಗಳು,  ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ನಝೀರ್ ಹುಸೈನ್ ಉಳ್ಳಾಲ  ಇಫ್ತಿಕಾರ್ ಅಹಮದ್ ಕೃಷ್ಣಾಪುರ , ಶಂಸುದ್ದೀನ್ ಬಳ್ಕುಂಜೆ, ಸತ್ತಾರ್ ಪುತ್ತೂರು, ನವಾಝ್ ಉಳ್ಳಾಲ, ಇಮ್ತಿಯಾಝ್ ಬಜ್ಪೆ,  ಮುಸ್ತಫಾ ಕೆ. ಸಿ. ರೋಡ್, ಹಮೀದ್ ಗೋಳ್ತಮಜಲು, ಖಾದರ್ ಮುಂಚೂರ್, ಸಫ್ವಾನ್ ಕಲಾಯಿ, ತಸ್ಲೀಂ ಹರೇಕಳ, ಅಬ್ದುಲ್ ಜಲೀಲ್ ಉಳ್ಳಾಲ, ರಾಫಿಝ್ ಕೃಷ್ಣಾಪುರ, ಸಫ್ವಾನ್ ಉಳ್ಳಾಲ  ಮುಂತಾದವರು ಉಪಸ್ಥಿತರಿದ್ದರು.

Also Read  ಮಾ. 21ರಂದು ಹರೇಕಳ ಗ್ರಾಮ ಸಭೆ

error: Content is protected !!
Scroll to Top