ಮುಂಬೈ: RBI ಗವರ್ನರ್ ಶಕ್ತಿಕಾಂತ್ ದಾಸ್ ಗೂ ಕೊರೊನಾ ಪಾಸಿಟಿವ್…!

(ನ್ಯೂಸ್ ಕಡಬ) newskadaba.com ಮುಂಬೈ, ಅ.27: ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೌರ್ನರ್ ಶಕ್ತಿಕಾಂತ್ ದಾಸ್ (63) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

ನನಗೆ ಸೋಂಕು ರೋಗದ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ನನಗೆ ಕೊರೊನಾ ದೃಢಪಟ್ಟಿದೆ. ನಾನು ಪ್ರತ್ಯೇಕವಾಗಿದ್ದುಕೊಂಡೇ RBI ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನನಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನಾನೀಗ ಕ್ವಾರಂಟೈನ್‍ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ವಿಡಿಯೋ ಕಾನರೆನ್ಸ್ ಮತ್ತು ದೂರವಣಿ ಮೂಲಕ RBI ಉಪ ‌ಗವರ್ನರ್ ಗಳು ಮತ್ತು ಉನ್ನತಾಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದೇನೆ. ಕಚೇರಿಯ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಮಂದಿ ಎಚ್ಚರಿವಾಗಿರಬೇಕು. ಕೋವಿಡ್ ವೈರಾಣು ಪರೀಕ್ಷೆಗೆ ಒಳಪಡಬೇಕು ಎಂದು RBI ಗವರ್ನರ್ ಸಲಹೆ ಮಾಡಿದ್ದಾರೆ.

Also Read  ದೇಶದ ಹಲವೆಡೆ ಮಳೆ ಅರ್ಭಟ ಹೆಚ್ಚಾಗಳಿದೆ.!➤ಹವಾಮಾನ ಇಲಾಖೆ ಸೂಚನೆ

 

error: Content is protected !!
Scroll to Top