ಕೆರೆಗುರುಳಿದ ಸ್ವಿಫ್ಟ್ ಡಿಸೈರ್ ► ಐವರು ನೀರುಪಾಲು

(ನ್ಯೂಸ್ ಕಡಬ) newskadaba.com  ಹಾಸನ,ಸೆ.27. ಸ್ವಿಫ್ಟ್ ಡಿಸೈರ್ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಐವರು ನೀರುಪಾಲಾದ ಘಟನೆ ಹಾಸನದ ಹನುಮನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಾಸನ ತಾಲೂಕಿನ ಹನುಮನಹಳ್ಳಿ ಬಳಿ ಈ ಘಟನೆ ನಡೆದಿದೆ. ಹಂಗ್ರಳ್ಳಿ ಗ್ರಾಮದಿಂದ ಗೊರೂರು ಮಾರ್ಗದಲ್ಲಿರುವ ಹನುಮನಹಳ್ಳಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ವ್ಯಕ್ತಿಯ ಶವ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಕಾರು ಕೆರೆಗೆ ಉರುಳಿರುವುದು ಬೆಳಕಿಗೆ ಬಂದಿತ್ತು. ನೀರಿನಲ್ಲಿ ತೇಲುತ್ತಿದ್ದ ಓರ್ವ ವ್ಯಕ್ತಿಯ ಶವವನ್ನು ಮೇಲೆತ್ತುವಾಗ ಕಾರು ನೀರೊಳಗೆ ಇರುವುದು ಗಮನಕ್ಕೆ ಬಂದಿದೆ. ಆ ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿರುವುದು ಗೊತ್ತಾಗಿದೆ.

Also Read  ಕೋಲಾರದಲ್ಲಿ ಆತಂಕಕಾರಿ ಸೂಟ್ ಕೇಸ್ ಪತ್ತೆ

ಘಟನೆಯಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು. ಹೊಳೆನರಸೀಪುರ ತಟ್ಟೆಕೆರೆಯ ಅನಿಲ್(22) ಹಾಗೂ ಶಿವಮೊಗ್ಗ ಮೂಲದ ಉಮೇಶ್ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರ್ ಮೇಲೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

error: Content is protected !!
Scroll to Top