ಎರಡನೇ ಮದುವೆ ಮಾಡ್ಕೊಳ್ಳೋರಿಗೆ ಬ್ಯಾಂಕ್ ನೀಡಲಿದೆ 6 ಲಕ್ಷ…!

(ನ್ಯೂಸ್ ಕಡಬ) newskadaba.com ಅ. 24. ಮನೆ ಕಟ್ಟುವವರಿಗೆ, ವಾಹನ ಖರೀದಿ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಕ್ಕೆ ಬ್ಯಾಂಕುಗಳು ಸಾಲ ನೀಡುತ್ತವೆ. ಆದರೆ ಮದುವೆಗೆ ಸಾಲ ನೀಡೋದಕ್ಕೆ ಮಾತ್ರ ಬಹುತೇಕ ಬ್ಯಾಂಕ್ ಗಳು ಹಿಂದೇಟು ಹಾಕುತ್ತದೆ. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ ವೊಂದು ಎರಡನೇ ಮದುವೆ ಆಗುವವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡುವ ಯೋಜನೆಯೊಂದನ್ನು ಘೋಷಿಸಿದೆ.

 

 

ಈ ಬ್ಯಾಂಕ್‌ ಎರಡನೇ ಮದುವೆಗೆಂದು 8389 ಡಾಲರ್‌ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ. ಆದರೆ ಈ ಸಾಲದ ಹಣವನ್ನು ಮೊದಲ ಮದುವೆಗೆ ಬಳಕೆ ಮಾಡುವಂತಿಲ್ಲ ಅನ್ನೋ ಕಂಡೀಷನ್‌ ಕೂಡ ಹಾಕಿದೆ. ಆದರೆ ಇಂತಹದ್ದೊಂದು ಸಾಲದ ಯೋಜನೆಯನ್ನು ಘೋಷಿಸಿರೋದು ಇರಾನ್‌ ನ ಅಲ್‌ ರಷೀದ್‌ ಹೆಸರಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌. ಇದು 2 ವರ್ಷದ ಕಾಲ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ಈ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದಿದೆ. ಎರಡನೇ ಮದುವೆಯಾಗ ಬಯಸುವ ಕಾರ್ಮಿಕರಿಗೆ ಈ ಸಾಲ ಸೌಲಭ್ಯ ನೀಡುವುದಾಗಿ ಘೋಷಣೆ ಮಾಡಿದೆ. ಬ್ಯಾಂಕ್‌ ಎರಡನೇ ಮದುವೆ ಆಗುವವರಿಗೆ ಸಾಲ ನೀಡುವ ಯೋಜನೆಯನ್ನು ಘೋಷಣೆ ಮಾಡಿರುವುದು ಮಹಿಳಾ ಪರ ನ್ಯಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Also Read  ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರೀಕೃತ ಉಚಿತ ಕಣ್ಣಿನ ತಪಾಸಣಾ ಶಿಬಿರ

 

error: Content is protected !!
Scroll to Top