ಮಂಜುನಾಥನಗರ: ದೀನ್ ದಯಾಳ್ ಉಪಾದ್ಯಾಯರ ಜನ್ಮ ದಿನಾಚರಣೆ

(ನ್ಯೂಸ್ ಕಡಬ) newskadaba.com ಸವಣೂರು,ಸೆ.27. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದವರು. ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು. ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸಾತ್ವಿಕ ಜೀವನ ನಡೆಸಿದ ಅವರು ಶ್ರೇಷ್ಠ ವ್ಯಕ್ತಿ ಎಂದು ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಹೇಳಿದರು.

ಅವರು ಮಂಗಳವಾರ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಶ್ರೀ ಗೌರಿ ಯುವತಿ ಮಂಡಲ, ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯಲ್ಲಿ ದೀನ್ ದಯಾಳ್ ಉಪಾದ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

Also Read  ವಿಪರೀತ ಗಾಳಿ - ಮಳೆಯ ಹಿನ್ನೆಲೆ ➤ ಬೆಳ್ತಂಗಡಿ ತಾಲೂಕಿನಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ

ಶ್ರೀ ಗೌರಿ ಯುವತಿ ಮಂಡಲದ ಗೌರವಾಧ್ಯಕ್ಷೆ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೀನ್ ದಯಾಳ್ ಉಪಾದ್ಯಾಯರು ಅತ್ಯಂತ ಕಠಿಣ ಪರಿಶ್ರಮದೊಂದಿಗೆ ಸಂಘಟನೆಯನ್ನು ಕಟ್ಟಿ ಬೆಳೆಸುವ ಮೂಲಕ ಸಾಮಾಜಿಕ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಜನ ಸಂಘ ಸ್ಥಾಪಿಸುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಜನರ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡವರು ಎಂದರು.

ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ , ಗ್ರಾ.ಪಂ.ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ, ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ, ಶ್ರೀ ಗೌರಿ ಯುವತಿ ಮಂಡಲದ ಅಧ್ಯಕ್ಷೆ ಪ್ರೇಮಾ ಎಸ್.ಎಂ.ವಂದಿಸಿದರು. ವಿದ್ಯಾ ಪ್ರಸಾದ್ ಪ್ರಾರ್ಥಿಸಿದರು. ನೆಹರು ಯುವಕೇಂದ್ರದ ತಾಲೂಕು ಸಂಯೋಜಕಿ ಗುರುಪ್ರಿಯಾ ನಾಯಕ್ ನಿರೂಪಿಸಿದರು.

Also Read  ಮಂಗಳೂರು : ಬಾಂಬ್ ಸ್ಪೋಟ - ಸಂತ್ರಸ್ತ ಚಾಲಕನ ಮನೆ ದುರಸ್ತಿಗೆ ನೆರವು

 

error: Content is protected !!
Scroll to Top