ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

(ನ್ಯೂಸ್ ಕಡಬ) newskadaba.com ಹಾಸನ, ಅ.24: ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಪಲ್ಟಿಯಾಗಿ 16 ಸಾವಿರ ಲೀಟರ್​ ಡೀಸೆಲ್ ಮಣ್ಣುಪಾಲಾಗಿರುವ ಘಟನೆ ನಡೆದಿದೆ.

 

 

ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಡೀಸೆಲ್​ ಟ್ಯಾಂಕರ್ ಹದಗೆಟ್ಟ ರಸ್ತೆಯಲ್ಲಿ ಮಗುಚಿ ಬಿದ್ದಿದೆ ಇನ್ನು ಅವಘಡದಿಂದ ಲಾರಿ ಟ್ಯಾಂಕರ್​ನ ಕ್ಯಾಪ್ ಓಪನ್ ಆಗಿ ಡೀಸೆಲ್ ರಸ್ತೆಗೆ ಸುರಿದಿದೆ. ಹಾಗಾಗಿ, ವಾಹನದತ್ತ ಜನರು ಹತ್ತಿರ ಹೋಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.

 

 

error: Content is protected !!

Join the Group

Join WhatsApp Group