(ನ್ಯೂಸ್ ಕಡಬ) newskadaba.com ಸವಣೂರು,ಸೆ.27. ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾ ದೇವತೆ, ಶಾರದೆ ಮಾತೆಯನ್ನು ಪೂಜಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ವಿವೇಕಾನಂದ ಯುವಕ ಮಂಡಲದ ಗೌರವಧ್ಯಕ್ಷ ಸುಧೀರ್ ಕುಮಾರ್ ರೈ ಕುಂಜಾಡಿ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಮಲಾ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಹರೀಶ್ ಕಟೀಲು, ಸುಂದರ ಭಂಡಾರಿ, ಅಂಗನವಾಡಿ ಕೇಂದ್ರದ ಸುಂದರಿ, ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಗೌರಿ ಯುವತಿ ಮಂಡಲದ ಅಧ್ಯಕ್ಷೆ ಪ್ರೇಮಾ ಎಸ್.ಎಂ ಮೊದಲಾದವರಿದ್ದರು.
Also Read ಕುತ್ತಾರು :ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಅಪಘಾತ ನಡೆಸಿ, ಚೂರಿಯಿಂದ ಇರಿದ ದುಷ್ಕರ್ಮಿಗಳು.?!
ಶಾಲಾ ಮುಖ್ಯಗುರು ಕುಸುಮಾ ಐ.ಟಿ.ಸ್ವಾಗತಿಸಿ, ವಂದಿಸಿದರು.