ಉಪ್ಪಿನಂಗಡಿ: ಸರಣಿ ಕಳ್ಳತನ ►14 ಸಾವಿರ ನಗದು, ಕಾಲೇಜಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ.27. ಇಲ್ಲಿನ ಹಲವು ಅಂಗಡಿ ಸೇರಿದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿದ ಕಳ್ಳರು ಸುಮಾರು 14 ಸಾವಿರ ನಗದು ದೋಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯ ಜೆರಾಕ್ಸ್ ಅಂಗಡಿ, ದೊಡ್ಡಣ್ಣ ಕಿಣಿ ಅಂಗಡಿ, ಸಫಾ ಫರ್ನಿಚರ್, ಯಮ್ ಯಮ್ ಎಸ್ ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು ಎಲ್ಲಾ ಕಡೆಯಿಂದ ಒಟ್ಟು ಸುಮಾರು 14 ಸಾವಿರ ನಗದು ಹಾಗು ಕಾಲೇಜಿನಿಂದ ಸಿಸಿ ಕ್ಯಾಮರದ ದ್ರಶ್ಯಗಳು ಶೇಖರವಾಗುವ ಡಿವಿಆರ್ ಕಳ್ಳತನ ಮಾಡಿದ್ದಾರೆ.

Also Read  ಉಡುಪಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ 87 ವರ್ಷದ ನಿವೃತ್ತ ಶಿಕ್ಷಕಿಗೆ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನ

ಶ್ರೀಧರ ಜ್ಯುವೆಲ್ಲರ್ಸ್ ಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾರೆ. ಮಂಗಲವಾರ ರಾತ್ರಿ ಘಟನೆ ನಡೆದಿದ್ದು, ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಗೊಂಡಿದ್ದಾರೆ.

error: Content is protected !!
Scroll to Top