ಮುಂಬೈ: ಶಾಪಿಂಗ್‌ ಮಾಲ್‌ ನಲ್ಲಿ ಬೆಂಕಿ ಅವಘಡ ➤3,500 ಜನರ ಸುರಕ್ಷತವಾಗಿ ಸ್ಥಳಾಂತರ…!

(ನ್ಯೂಸ್ ಕಡಬ) newskadaba.com ಮುಂಬೈ, ಅ.23: ಮುಂಬೈನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 20 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿವೆ.

 

 

ಕಳೆದ ದಿನ ರಾತ್ರಿ ಈ ಅಗ್ನಿ ಅವಘಡ ಸಂಭವಿಸಿದ್ದು, 12 ಗಂಟೆ ಕಳೆದರೂ ಬೆಂಕಿ ಸಂಪೂರ್ಣವಾಗಿ ಅರಲಿಲ್ಲ. ಈ ವರೆಗೂ 3,500 ಜನರನ್ನು ಸುರಕ್ಷತವಾಗಿ ರಕ್ಷಣೆ ಮಾಡಿದ್ದಾರೆ. ಬೆಂಕಿಯ ಕೆನ್ನಾಲಿಗೆ 4 ಮಹಡಿಯ ಕಟ್ಟಡದ ಹಲವು ಕಡೆ ಹರಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕಾರ್ಯಾಚರಣೆ ಮೇಲೆ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಗ್ನಿ ರೌದ್ರನರ್ತನ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಘಟನೆಗೆ ಕಾರಣಗಳು ಏನು ಎಂಬುದಾಗಿ ತಿಳಿದುಬಂದಿಲ್ಲ.

Also Read  ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ..!

 

error: Content is protected !!
Scroll to Top