ಪಂಜಾಬ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಸಜೀವ ದಹನ ➤ ಕಠಿಣ ಶಿಕ್ಷೆಗೆ ಪಂಜಾಬ್ ಸಿಎಂ ಆಗ್ರಹ

(ನ್ಯೂಸ್ ಕಡಬ) newskadaba.com ಪಂಜಾಬ್, ಅ.23: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಸಜೀವ ದಹನ ಮಾಡಿದ ಭೀಕರ ಘಟನೆ ಪಂಜಾಬ್ ನ ಹೋಶಿಯಾರ್ ಪುರದ ಜಲಾಲ್ ಪುರದಲ್ಲಿ ನಡೆದಿದೆ. ಇದೋಂದು ಪಂಜಾಬ್ ನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಅರ್ಧ ಸುಟ್ಟುಹೋಗಿರುವ ದೇಹ ಮನೆಯೊಂದರಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಗುರ್ ಪ್ರೀತ್ ಸಿಂಗ್ ಹಾಗೂ ಆತನ ಅಜ್ಜ ಸುರ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ.

 

 

ಆ ರೋಪಿಗಳಿಬ್ಬರನ್ನು ಕೊಲೆ, ಅತ್ಯಾಚಾರದ ಆರೋಪದಡಿ, ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರ್ ಪ್ರೀತ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತ ಬಾಲಕಿಯ ತಂದೆ ಆರೋಪಿಸಿದ್ದಾರೆ. ಆರೋಪಿಗಳ ಮನೆಯಲ್ಲೇ ಸಂತ್ರಸ್ತ ಬಾಲಕಿಯ ದೇಹ ಪತ್ತೆಯಾಗಿದೆ. ಇನ್ನು ಘಟನೆ ಕುರಿತು ಮಾತನಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಇದು ತೀವ್ರ ಆಘಾತಕಾರಿ ಘಟನೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ ಕೂಡ ತ್ವರಿತವಾಗಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಡಿಜಿಪಿಯವರಿಗೆ ಆದೇಶ ನೀಡಿದ್ದಾರೆ.

Also Read  ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ➤ 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ

 

 

error: Content is protected !!
Scroll to Top