ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ತರಕಾರಿ ಟೆಂಪೋ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.23: ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಸಾಗಾಟದ ವಾಹನ ಹಳ್ಳಕ್ಕೆ  ಬಿದ್ದ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 75 ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.

 

 

ಈ ಟೆಂಪೋ ಹಾಸನ ಮೂಲದ್ದಾಗಿದ್ದು, ಪುತ್ತೂರು ಕಡೆಗೆ ತರಕಾರಿ ಸಾಗಾಟ ಮಾಡಲಾಗುತ್ತಿತ್ತು. ರಸ್ತೆಯಲ್ಲಿ ಇರುವ ಬೃಹತ್‌ ಗುಂಡಿ ತಪ್ಪಿಸಲು ಹೋಗಿ ಈ ಯೊಂದು ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಇದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದೇ ಅಪಾಯದಿಂದ ಪಾರಾಗಿದ್ದಾರೆ.

Also Read  ಇಂದು ಕಡಬದಲ್ಲಿ ಬುರ್ಖಾ ಪ್ಯಾಲೇಸ್ ಶುಭಾರಂಭ ► ವಿವಿಧ ವಿನ್ಯಾಸದ ಬುರ್ಖಾಗಳ ಸುಸಜ್ಜಿತ ಮಳಿಗೆ

 

error: Content is protected !!
Scroll to Top