ಪುತ್ತೂರು: ಅನ್ನಭಾಗ್ಯ ಅಕ್ಕಿಯಲ್ಲಿ ಹುಳುಗಳು ಪತ್ತೆ..!!! ► ಆಕ್ರೋಶಿತರಾದ ನೇಲ್ಯಡ್ಕ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಪುತ್ತೂರು,ಸೆ.27. ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುವ ಅನ್ನಭಾಗ್ಯ ಅಕ್ಕಿಯಲ್ಲಿ ಹುಳುಗಳು ಹೆಚ್ಚಾಗಿದ್ದು, ಅನ್ನಭಾಗ್ಯ ಜೊತೆಗೆ ಹುಳುಭಾಗ್ಯ ವಿತರಣೆಯಾಗುತ್ತಿದೆ.

ಈ ಹಿನ್ನಲೆಯಲ್ಲಿ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ. ಮಂಗಳವಾರ ಸಂಚಾರಿ ನ್ಯಾಯಬೆಲೆ ಅಂಗಡಿಗೆ ಅಕ್ಕಿ ತುಂಬಿಸಿಕೊಂಡು ಬಂದಿದ್ದ ಲಾರಿಯನ್ನು ತಡೆದ ನೇಲ್ಯಡ್ಕ ಗ್ರಾಮಸ್ಥರು, ಬಳಿಕ ಅಕ್ಕಿಚೀಲವನ್ನು ಪರಿಶೀಲಿಸಿದಾಗ ಅಕ್ಕಿಯಲ್ಲಿ ಹುಳಗಳಿರುವುದು ಗಮನಕ್ಕೆ ಬಂದಿದೆ. ಐತ್ತೂರು ಗ್ರಾಮ ಪಂಚಾಯಿತಿ ಸತೀಶ್ ಕೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಅಕ್ಕಿಯಲ್ಲಿ ಹುಳಗಳ ರಾಶಿಯನ್ನು ಕಂಡು ಪಡಿತರ ವಿತರಕರನ್ನು ತರಾಟೆಗೆ ತೆಗೆದುಕೊಂಡರು.

Also Read  ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ & ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯ ➤ ಸಿರಿಬಾಗಿಲು- ಕೊಂಬಾರು ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

 

 

 

 

error: Content is protected !!
Scroll to Top