ನಂಬಿಕೆಯಿಂದ ನಾವು ಕಾರ್ಯ ಸಿದ್ದಿಸಿಕೊಳ್ಳಬಹುದು ➤ ಪ್ರೋ. ಜ್ಞಾನೇಶ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.22: ಯಾವುದೇ ವಿಷಯದಲ್ಲಿ ನಂಬಿಕೆ ಮುಖ್ಯವಾಗಿದ್ದು ನಂಬಿಕೆಯಿಂದ ಕಾರ್ಯಸಿದ್ದಿಸಿಕೊಳ್ಳಬಹುದು ಎಂದು ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ. ಜ್ಞಾನೇಶ್ ಹೇಳಿದರು. ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಗಳ ಕೃತಿ ನಂದಿಸದಿರಿ ನಂದಾದೀಪವನ್ನು ಉದ್ಘಾಟಿಸಿ ಮಾತನಾಡಿದರು.

 

 

ದೇವರಲ್ಲಿಯೂ ನಂಬಿಕೆ ಇದ್ದರೆ ಮಾತ್ರ ದೇವರು ಒಲಿಯುತ್ತಾನೆ. ಆಶ್ರಮದ ಸ್ವಾಮಿಗಳ ತ್ಯಾಗಮಯ ಜೀವನ ಎಲ್ಲಾರಿಗೆ ಆದರ್ಶ ಎಂದು ಹೇಳಿದರು. ಶ್ರೀ ಯೋಗೇಶ್ವರಾನಂದ ಸ್ವಾಮಿ ಮಾತನಾಡಿ ಇಂದು ವಿಜ್ಜಾನ ಅತ್ಯಂತ ಮುಂದುವರಿದಿದ್ದು ಪ್ರಕೃತಿಗೆ ವಿರುದ್ದವಾದ ಕ್ರಿಯೆಗಳು ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ ನಾವು ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂದು ಅವರು ಹೇಳಿದರು. ಪ್ರೋ.ರೇಖಾ, ನಿವೃತ್ತ ಎ.ಎಸ್‌. ಐ ಕುಶಾಲಪ್ಪ ಗೌಡ ಮುಖ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಡಾ.ಸಾಯಿಗೀತಾ, ಪ್ರೊ.ಅನಿಲ್, ಆಶ್ರಮದ ಟ್ರಸ್ಟಿ ಪ್ರಣವಿ ಉಪಸ್ಥಿತರಿದ್ದರು. ನವರಾತ್ರಿ ಪ್ರಯುಕ್ತ ಗಣಹೋಮ, ಭಜನಾ ಕಾರ್ಯಕ್ರಮ ನಡೆಯಿತು.

Also Read  ಮಂಗಳೂರು: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

 

error: Content is protected !!
Scroll to Top