(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.22: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಎಂಬ ಮೊಸಳೆ ಇಂದು ದೇಗುಲದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಈ ದೇವಸ್ಥಾನ ಕೆರೆಯ ಮಧ್ಯದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿದೆ.
ನದಿಯ ಮಧ್ಯಭಾಗದಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದ್ದು, ಬಬಿಯಾ ಹೆಸರಿನ ಮೊಸಳೆ ಅದೇ ನದಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ದೇಗುಲದ ಗರ್ಭಗುಡಿಗೆ ಮೊಸಳೆ ಬಂದಿದೆ ಅಂತಾ ಅರ್ಚಕರು ಅಭಿಪ್ರಾಯ ಪಟ್ಟಿದ್ದಾರೆ. ಬಬಿಯಾನನ್ನ ದೇವರ ಮೊಸಳೆ ಎಂದೇ ಸ್ಥಳೀಯರು ನಂಬಿದ್ದಾರೆ. ಈ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ನೀಡೋದr ಜೊತೆಗೆ ಬಬಿಯಾಗೂ ನಿತ್ಯ ನೇವೈದ್ಯ ಸಮರ್ಪಣೆ ಮಾಡಲಾಗುತ್ತದೆ.