ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22: ಬಂಟ್ವಾಳ ತಾಲೂಕಿನ ಧರ್ಮ ದೈವ ಕಾರಣಿಕದ ಕಲ್ಲುರ್ಟಿ ದೈವಸ್ಥಾನ ಪಣೋಲಿಬೈಲ್ ಇದರ ನೂತನ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.

 

 

ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಗಡಿ ಬಂದ್ ಆದಂತಹ ಸಂದರ್ಭದಲ್ಲಿ ಗಡಿ ಪ್ರದೇಶಗಳ ಜನತೆಯನ್ನು ಮನವರಿಕೆ ಮಾಡಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮ ಹೀಗೆ ಹತ್ತು ಹಲವು ರೀತಿಯಲ್ಲಿ ದಕ್ಷ ಅಧಿಕಾರಿ ರಶ್ಮಿ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷಗಳಿಂದ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಆಗಿದ್ದು ಕೊಂಡು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂಧಿಸಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ರಶ್ಮಿ ಪಾತ್ರರಾಗಿದ್ದರು, ಈ ಹಿನ್ನೆಲೆಯಲ್ಲಿಯೆ ತಹಶೀಲ್ದಾರ್ ರಶ್ಮಿ ಎಸ್. ಆರ್ ರವರಿಗೆ ಧಾರ್ಮಿಕ ದತ್ತಿ ಇಲಾಖೆ ಯು ಜವಾಬ್ದಾರಿ ನೀಡಿ ನೇಮಕ ಮಾಡಿದೆ.

Also Read  ಸುಳ್ಯ: ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ► ಆರನೇ ಬಾರಿ ವಿಜಯದ ಪತಾಕೆ ಹಾರಿಸಿದ ಎಸ್.ಅಂಗಾರ

 

 

error: Content is protected !!
Scroll to Top