ಕಾಸರಗೋಡು: ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.22: ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅವರ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶವೊಂದು ಹರಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು. ಯಾರೂ ಮೋಸ ಹೋಗಕೂಡದು ಎಂದು ಅವರು ತಿಳಿಸಿದ್ದಾರೆ.

 

 

ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್‌ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬ ರೀತಿಯ ಸಂದೇಶ ಇಲ್ಲಿ ರವಾನೆಗೊಂಡಿದೆ.ತಲಾ 5 ಸಾವಿರ ರೂ.ಮೌಲ್ಯದ 4 ಅಮೆಝೋನ್ ಈ-ಕಾರ್ಡ್ ಖರೀದಿಸಿ jamsteh08@gmail.com ಎಂಬ ಈ-ಮೇಲ್‌ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ ರವಾನಿಸುವಂತೆ ನಕಲಿ ಸಂದೇಶವೊಂದು ಜಿಲ್ಲಾ ಇಲಾಖೆ ಮುಖ್ಯಸ್ಥರಿಗೆ ಲಭಿಸಿದೆ. executivedirector29@gmail.com ಎಂಬ ಈ-ಮೇಲ್ ನಿಂದ ಈ ಹುಸಿ ಸಂದೇಶ ರವಾನೆಯಾಗಿದೆ. ಇದು ನಕಲಿ ಎಂಬುದು ತನಿಖೆಯಿಂದ ಖಚಿತಗೊಂಡಿದೆ. ಈ ಬಗ್ಗೆ ಜಾಗೃತೆ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Also Read  ರಾಜ್ಯದಲ್ಲಿ ಡ್ರಗ್ಸ್ ದಂಧೆ:  ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ

 

error: Content is protected !!
Scroll to Top