(ನ್ಯೂಸ್ ಕಡಬ) newskadaba.com ಉಡುಪಿ, ಅ.21: ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ.
ಆದರೆ ಮಲ್ಪೆ ಮೀನುಗಾರರಿಗೆ ಇಂದು (ಮಂಗಳವಾರ) ಸಿಕ್ಕ ಮೀನು ಮಾತ್ರ ಬಲು ಅಪರೂಪವಾಗಿದ್ದು ಮಾತ್ರವಲ್ಲ, ಗಾತ್ರದಲ್ಲೂ ದಾಖಲೆ ನಿರ್ಮಿಸಿದೆ. ಈ ಮೀನನ್ನು ಕರಾವಳಿಗರು ತೊರಕೆ ಮೀನು ಎನ್ನುತ್ತಾರೆ. ಬಹಳ ರುಚಿಯಾದ ಮೀನಿದು, ಇಂದು ಸಿಕ್ಕಿದ ಮೀನು ಬರೋಬ್ಬರಿ 750 ಕೆ.ಜಿ ಯದ್ದಾಗಿದೆ. ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ ಈ ಮೀನು ಸಿಕ್ಕಿದೆ. ಹೀಗಾಗಿ ಕ್ರೇನ್ ಮೂಲಕ ಮೀನನ್ನು ಮೇಲೆತ್ತಲಾಯಿತು. ಇತ್ತೀಚಿನ ವರ್ಷಗಳಲ್ಲಿ ಬಲೆಗೆ ಬಿದ್ದ ಅತಿ ದೊಡ್ಡ ತೊರಕೆ ಮೀನು ಇದಾಗಿದೆ.