ಮಹಾರಾಷ್ಟ್ರ: ಕಮರಿಗೆ ಉರುಳಿ ಬಿದ್ದ ಬಸ್‌ ➤ ಐವರ ದುರ್ಮರಣ, 35ಕ್ಕೂ ಹೆಚ್ಚು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಅ.21: ಬಸ್ಸೊಂದು ಕಮರಿಗೆ ಉರುಳಿ ಬಿದ್ದು ಕನಿಷ್ಠ ಐವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ವಿಸರ್ವಾಡಿ ಸಮೀಪದ ಕೊಂಡೈಬಾರಿ ಘಾಟ್ ಬಳಿ ಇಂದು ನಡೆದಿದೆ.

 

 

ಮೃತರಲ್ಲಿ ಬಸ್ ಚಾಲಕ ಹಾಗೂ ಕ್ಲೀನರ್ ಸೇರಿ ಮೂವರು ಪ್ರಯಾಣಿಕರು ಸೇರಿದ್ದು, ಬಸ್ ಮಲ್ಕಾಪುರದಿಂದ ಸೂರತ್ ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈಯೊಂದು ಬಸ್ ಅಪಘಾತದಲ್ಲಿ 34 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಗಾಯಾಳುಗಳ ಪೈಕಿ 31 ಮಂದಿ ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂದುರ್ಬಾರ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ ಪಿ, ಎಸ್ ಡಿಪಿಒ, 5 ಅಧಿಕಾರಿಗಳು ಮತ್ತು 50 ಮಂದಿ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದು, ಎಲ್ಲ ರೀತಿಯ ನೆರವು ಒದಗಿಸುತ್ತಿದ್ದಾರೆ ಎನ್ನಲಾಗಿದೆ.

Also Read  ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ.!

 

error: Content is protected !!
Scroll to Top