ಮಂಗಳೂರು: ಭಾರತ ಬ್ಯಾಂಕ್ ಸ್ಥಾಪಕ ಜಯ ಸಿ. ಸುವರ್ಣ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.21: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಲ್ಕಿಯ ಭಾರತ ಬ್ಯಾಂಕ್ ಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ (75) ರವರು ಇಂದು ಮುಂಬೈಯಲ್ಲಿ ನಿಧನರಾದರು.

 

 

ಇವರು ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ಸ್ಥಾಪಕ ಅಧ್ಯಕ್ಷರಾಗಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇಗುಲದ ಅಭಿವೃದ್ಧಿ ಹಾಗೂ ಇತರ ಕಾರ್ಯಗಳಿಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಜೊತೆ ಕೈ ಜೋಡಿಸಿಕೊಂಡವರು. ಗೋರೆಗಾಂವ್‌ನ ಜಯಪ್ರಕಾಶ್ ಹೋಟೆಲ್ ಮಾಲೀಕ, ಸಾಯಿ ವೆಜ್ ಗ್ರೂಪ್ ಆಫ್ ಹೋಟೆಲ್‌ಗಳ ಸ್ಥಾಪಕರೂ ಆಗಿದ್ದಾರೆ. ಮುಂಬೈನಲ್ಲಿ ಹೋಟೆಲ್ ಉದ್ಯಮದ ಜೊತೆ ಅಲ್ಲಿನ ಹಾಗೂ ಕರಾವಳಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡಿದ್ದರು.

Also Read  ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ

 

 

error: Content is protected !!
Scroll to Top