ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತನ ಜೇಬಿಗೆ ಕನ್ನ ಹಾಕಿದ ಕಳ್ಳರು ► ಬಟ್ಟೆ ಮೇಲೆ ಶಾಯಿ ಎರಚಿ ಕೃತ್ಯ

(ನ್ಯೂಸ್ ಕಡಬ) newskadaba.com ಮಂಡ್ಯ,ಸೆ.26. ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತರೋರ್ವರನ್ನು ಹಿಂಬಾಲಿಸಿದ ಕಳ್ಳರು  15 ಸಾವಿರ ರೂ. ಹಣವನ್ನು ದೋಚಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಮಂಗಳವಾರ 11.30ರ ಸುಮಾರಿಗೆ ನಡೆದಿದೆ.

ರೈತ ನಿಂಗೇಗೌಡ ಎಂಬುವವರು ವಿಜಯ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದರು. ಈ ವೇಳೆ ನಿಂಗೇಗೌಡರನ್ನು ಹಿಂಬಾಲಿಸಿದ ಕಳ್ಳರು ಶರ್ಟ್ ಮೇಲೆ ಉಪಾಯವಾಗಿ ಶಾಯಿ ಚೆಲ್ಲಿದ್ದಾರೆ. ನಂತರ ಬಟ್ಟೆಯನ್ನು ಕ್ಲೀನ್ ಮಾಡುವ ನೆಪದಲ್ಲಿ ಬಂದು ನಿಂಗೇಗೌಡರ ಶರ್ಟ್ ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

Also Read  ಅತ್ತಿಗೆಗೆ ಸೇರಬೇಕಾದ ಇನ್ಶುರೆನ್ಸ್ ಹಣವನ್ನೇ ಲೂಟಿ ಮಾಡಿದ ಪಾಪಿ ಮೈದುನ!

ಕೆಆರ್ ಪೇಟೆ ಪಟ್ಟಣದ ಲೋಕೇಶ್ ಬುಕ್ ಹೌಸ್ ಎದುರು ಅಳವಡಿಸಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು,  ಕೆಆರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!