ಹಿರಿಯ ಪತ್ರಕರ್ತ ಶ್ಯಾಮ ಸುಂದರ್ ನಿಧನ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಅ.20: ದಿ ಹಿಂದು ಪತ್ರಿಕೆ ವರದಿಗಾರರಾಗಿ ಕೆಲಸ ಮಾಡಿದ ಹಿರಿಯ ಪತ್ರಕರ್ತರಾದ  ಶ್ಯಾಮ ಸುಂದರ್(70) ರವರು ಹೃದಯಾಘಾತದಿಂದ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

 

ಇವರಿಗೆ ಇನ್ವೆಸ್ಟಿಗೇಷನ್ ವರದಿಗಾರಿಕೆಯಲ್ಲಿ ಬಂಗಾರದ ಪದಕ ಪಡೆದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಂತ ಹಿರಿಯ ಪತ್ರಕರ್ತರಾಗಿರುತ್ತಾರೆ. ಶ್ಯಾಮ ಸುಂದರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರು, ಪತ್ನಿ, ಇಬ್ಬರು ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Also Read  ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top